ADVERTISEMENT

ಕೊಳ್ಳೇಗಾಲ: ಓಂಶಕ್ತಿ ಯಾತ್ರೆ; ಮಾಲೆ ಹಾಕದಂತೆ ಸೂಚನೆ

ಕೊಳ್ಳೇಗಾಲದ ದೇವಾಲಯಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 16:26 IST
Last Updated 8 ಜನವರಿ 2022, 16:26 IST
ಕೊಳ್ಳೇಗಾಲ ತಹಶೀಲ್ದಾರ್‌ ಅವರು ಕೊಳ್ಳೇಗಾಲದ ಓಂ ಶಕ್ತಿ ದೇವಾಲಯಕ್ಕೆ ಭೇಟಿ ನೀಡಿ, ಭಕ್ತರು ಮಾಲೆ ಹಾಕದಂತೆ ಅಲ್ಲಿನ ಅರ್ಚಕರಿಗೆ ಸೂಚಿಸಿದರು
ಕೊಳ್ಳೇಗಾಲ ತಹಶೀಲ್ದಾರ್‌ ಅವರು ಕೊಳ್ಳೇಗಾಲದ ಓಂ ಶಕ್ತಿ ದೇವಾಲಯಕ್ಕೆ ಭೇಟಿ ನೀಡಿ, ಭಕ್ತರು ಮಾಲೆ ಹಾಕದಂತೆ ಅಲ್ಲಿನ ಅರ್ಚಕರಿಗೆ ಸೂಚಿಸಿದರು   

ಕೊಳ್ಳೇಗಾಲ: ತಮಿಳುನಾಡಿಗೆ ಓಂಶಕ್ತಿ ಯಾತ್ರೆ ಕೈಗೊಳ್ಳಲು ಉದ್ದೇಶಿಸಿರುವ ಭಕ್ತರಿಗೆ ಮಾಲೆ ಹಾಕದಂತೆಇಲ್ಲಿನ ಹಳೆ ಕುರುಬರ ಬೀದಿಯಲ್ಲಿರುವ ಓಂಶಕ್ತಿ ದೇವಾಲಯಕ್ಕೆ ತಾಲ್ಲೂಕು ಆಡಳಿತ ಸೂಚಿಸಿದೆ.

ತಮಿಳುನಾಡಿನ ಮೇಲ್‌ಮರ ವತ್ತೂರಿನ ಆದಿಪರಾಶಕ್ತಿ ದೇವಾಲಯಕ್ಕೆ ತೆರಳುವ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ನೂರಾರು ಭಕ್ತರು ನಗರದಲ್ಲಿರುವ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ, ಮಾಲೆ ಹಾಕುತ್ತಾರೆ.ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ, ಚಾಮರಾಜ ನಗರ, ಮಂಡ್ಯ, ಕೆ.ಎಂ.ದೊಡ್ಡಿ, ಮೈಸೂರು, ಹಾಸನ, ಕನಕಪುರದ ಕಡೆಗಳಿಂದ ಭಕ್ತರು ಬರುತ್ತಾರೆ.

ತಮಿಳುನಾಡಿಗೆ ಯಾತ್ರೆ ಹೋಗಿ ಬಂದವರಲ್ಲಿ ಕೋವಿಡ್‌ ದೃಢಪಡುತ್ತಿರುವ ಪ್ರಕರಣಗಳು ಹೊರ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ಆಡಳಿತ ಈ ಕ್ರಮ ಕೈಗೊಂಡಿದೆ.

ADVERTISEMENT

‘ಯಾರಿಗೂ ಮಾಲೆ ಹಾಕಬಾರದು. ಒಂದು ವೇಳೆ ಹಾಕಿದರೂ ರಾಜ್ಯದ ಚೆಕ್‌ಪೋಸ್ಟ್‌ಗಳಲ್ಲಿ ಎಲ್ಲರನ್ನೂ ತಡೆದು ವಾಪಸ್‌ ಕಳುಹಿಸಲಾಗುವುದು’ ಎಂದು ಶಂಕರ್‌ರಾವ್‌ ಎಚ್ಚರಿಕೆ ನೀಡಿದರು.

ಅರ್ಚಕರಾದ ಈಶ್ವರಿ, ಧನಲಕ್ಷ್ಮೀ, ಭಾಗ್ಯಾ, ಸುಮತಿ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.