ADVERTISEMENT

ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಹುಂಡಿ ಏಣಿಕೆ: ₹2.78 ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 8:08 IST
Last Updated 30 ಜನವರಿ 2026, 8:08 IST
ಕೊಳ್ಳೇಗಾಲ ಇಲ್ಲಿನ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಮರುಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು
ಕೊಳ್ಳೇಗಾಲ ಇಲ್ಲಿನ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಮರುಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು   

ಕೊಳ್ಳೇಗಾಲ: ಇಲ್ಲಿನ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಮರುಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು. ಒಟ್ಟು ₹2.78 ಲಕ್ಷ ನಗದು ಸಂಗ್ರಹವಾಗಿದೆ.

ನಗರದ ಶ್ರೀ ಲಕ್ಷ್ಮೀನಾರಾಯಣಸ್ವಸ್ವಾಮಿ ಹಾಗೂ ಶ್ರೀ ಮರುಳೇಶ್ವರ ದೇವಸ್ಥಾನದ ತಲಾ ಒಂದೊಂದು ಹುಂಡಿಗಳ ಏಣಿಕೆ ಕಾರ್ಯ ತಹಶೀಲ್ದಾರ್ ಬಸವರಾಜು ನೇತೃತ್ವದಲ್ಲಿ ನಡೆಯಿತು.

ಕಳೆದ ಎರಡು ವರ್ಷಗಳ ನಂತರ ನಡೆದ ಶ್ರೀ ಮರುಳೇಶ್ವರ ಸ್ವಾಮಿ ದೇವಸ್ಥಾನ ಹುಂಡಿಯಲ್ಲಿ ₹1.9 ಲಕ್ಷ ಸಂಗ್ರಹವಾಗಿದೆ.
ಬಳಿಕ ನಾರಾಯಣಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ₹1.9 ಲಕ್ಷ ಸಂಗ್ರಹವಾಗಿದೆ. ಹುಂಡಿ ಎಣಿಕೆಯನ್ನು ವಿಡಿಯೊ ಚಿತ್ರೀಕರಣ ಮಾಡಲಾಯಿತು. ನಗರ ಠಾಣೆಯ ಪೊಲೀಸರಿಂದ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.

ಹುಂಡಿ ಎಣಿಕೆ ವೇಳೆ ಉಪತಹಶೀಲ್ದಾರ್ ವಿಜಯಕುಮಾರ್, ರಾಜಸ್ವ ನಿರೀಕ್ಷಕ ನಿರಂಜನ್, ವಿಷಯ ನಿರ್ವಾಹಕ ಸುಮಂತ್, ಗ್ರಾಮ ಆಡಳಿತ ಅಧಿಕಾರಿ ರಾಕೇಶ್, ಅನಿಲ್, ಪ್ರದೀಪ್, ವಿಷ್ಣು, ಪೂರ್ಣಿಮ, ಅಕ್ಷತಾ, ರಕ್ಷಿತಾ, ಜ್ಞಾನೇಶ್ವರಿ, ಕೋಟಕ್ ಮಹಿಂದ್ರ ಬ್ಯಾಂಕ್ ಸಿಬ್ಬಂದಿ, ಅರ್ಚಕ ನಾಗೇಂದ್ರ ಭಟ್ಟ್, ಸುದರ್ಶನ್ ಭಟ್ಟ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT