ಸಂತೇಮರಹಳ್ಳಿ: ಸಮೀಪದ ಕಮರವಾಡಿ ಗ್ರಾಮದ ಮಲ್ಲಣ್ಣ ಎಂಬುವರ ಮೇಲೆ ಶನಿವಾರ ಮಧ್ಯರಾತ್ರಿ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.
ಗ್ರಾಮದ ಹೊರ ಭಾಗದ ತಮ್ಮ ಜಮೀನಿನಲ್ಲಿದ್ದ ಮನೆ ಮುಂಭಾಗ ಮಲಗಿದ್ದಾಗ ಚಿರತೆ ದಾಳಿ ನಡೆಸಿದ್ದು, ತಕ್ಷಣ ಎಚ್ಚೆತ್ತ ಅವರು ಮನೆಯ ಒಳಗೆ ಹೋಗಿದ್ದಾರೆ. ಅವರ ಹಣೆ ಭಾಗದಲ್ಲಿ ಗಾಯವಾಗಿದ್ದು, ಭಾನುವಾರ ಬೆಳಿಗ್ಗೆ ಸಂತೇಮರಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಂತೇಮರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.