ADVERTISEMENT

ಹನೂರು: ಚಿರತೆ ದಾಳಿಗೆ 9 ಕುರಿ, 6 ಕೋಳಿ ಸಾವು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 16:06 IST
Last Updated 23 ಏಪ್ರಿಲ್ 2024, 16:06 IST
ಹನೂರು ತಾಲೂಕಿನ ನಾಗಣ್ಣನಗರ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಕುರಿಗಳನ್ನು ತಿಂದು ಹಾಕಿರುವುದು.
ಹನೂರು ತಾಲೂಕಿನ ನಾಗಣ್ಣನಗರ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಕುರಿಗಳನ್ನು ತಿಂದು ಹಾಕಿರುವುದು.   

ಹನೂರು: ನಾಗಣ್ಣ ನಗರದಲ್ಲಿ ಚಿರತೆ ದಾಳಿ ಮಾಡಿ 9 ಕುರಿ, 6 ಕೋಳಿಯನ್ನು ಕೊಂದು ಹಾಕಿದೆ.

ಗ್ರಾಮದ ರೈತ ವೇದಂತಿ ಕೌಂಡರ್ ಅವರ ತೋಟದ ಮನೆಯ ಬಳಿ ಚಿರತೆ ದಾಳಿ ನಡೆಸಿ ಈ ರೀತಿ ಕೊಂದು ಹಾಕಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಸಾಲನ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

‘ಚಿರತೆ ದಾಳಿಯಿಂದ ಆಗಿರುವ ನಷ್ಟದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ರೈತರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.