ADVERTISEMENT

ವಾಹನ ಡಿಕ್ಕಿ: ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 19:26 IST
Last Updated 22 ಫೆಬ್ರುವರಿ 2022, 19:26 IST
ಹೆದ್ದಾರಿಯಲ್ಲಿ ಕಂಡು ಬಂದ ಚಿರತೆಯ ಕಳೇಬರ
ಹೆದ್ದಾರಿಯಲ್ಲಿ ಕಂಡು ಬಂದ ಚಿರತೆಯ ಕಳೇಬರ   

ಹನೂರು (ಚಾಮರಾಜನಗರ): ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ, ತಾಲ್ಲೂಕಿನ ಗುರುಮಲ್ಲಪ್ಪನದೊಡ್ಡಿ ರಸ್ತೆಯಲ್ಲಿ ಸೋಮವಾರ ರಾತ್ರಿ ವಾಹನವೊಂದು ಡಿಕ್ಕಿ ಹೊಡೆದು ಗಂಡು ಚಿರತೆ ಮೃತಪಟ್ಟಿದೆ.

ಲೊಕ್ಕನಹಳ್ಳಿಯಿಂದ ತಮಿಳುನಾಡಿನ ಸತ್ಯಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಚಿರತೆ ಸತ್ತು ಬಿದ್ದಿರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬಿಆರ್‌ಟಿಯ ಬೈಲೂರು ವಲಯದ ಸಿಬ್ಬಂದಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT