ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಬೆಳ್ಳಿ ಮತ್ತು ಚಿನ್ನದ ಎಣಿಕೆ ಹಾಗೂ ಪರ್ಕಾವಣೆ ಗುರುವಾರ ಜರುಗಿತು.
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ನಡೆಯಿತು. 28 ದಿನಗಳಲ್ಲಿ ಹುಂಡಿಯಲ್ಲಿ ನಾಣ್ಯ ಮತ್ತು ಇ–ಹುಂಡಿ ಸೇರಿ ₹ 1,94,49,243 ನಗದು ಹಾಗೂ 63.6 ಗ್ರಾಂ ಚಿನ್ನ , ಹಾಗೂ 1. 50 ಕೆ.ಜಿ. ಬೆಳ್ಳಿ ಪದಾರ್ಥ ಸಂಗ್ರಹವಾಗಿದ್ದು, 11 ವಿದೇಶಿ ನೋಟುಗಳು ದೊರೆತಿವೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.