ADVERTISEMENT

ಮಹದೇಶ್ವರ ಬೆಟ್ಟದಲ್ಲಿ ಸಾಲು ಗಿಡ ನಾಟಿ

ಈಶ್ವರಿ ಖಾಸಗಿ ಸಂಸ್ಥೆಯಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 13:13 IST
Last Updated 18 ಫೆಬ್ರುವರಿ 2025, 13:13 IST
ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗುರು ಹಿರಿಯರು
ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗುರು ಹಿರಿಯರು   

ಮಹದೇಶ್ವರ ಬೆಟ್ಟ: ಈಶ್ವರಿ ಸೋಷಿಯಲ್ ಟ್ರಸ್ಟ್  ಸಂಸ್ಥೆ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಮಲೆಮಹದೇಶ್ವರ ಸ್ವಾಮಿ ಬೆಟ್ಟದ ಮುಖ್ಯರಸ್ತೆ ಬದಿಯಲ್ಲಿ 100 ಸಾಲುಗಿಡಗಳನ್ನು ನೆಡಲಾಯಿತು.

ಸಾಲೂರು ಬೃಹನ್ಮಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಗಿಡ ನೆಟ್ಟು ನೀರೆರೆದು ಸಾಲುಗಿಡಗಳ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಸ್ವಾಮೀಜಿ ಮಾತನಾಡಿ, ‘ಬೆಟ್ಟಕ್ಕೆ ಬರುವಂತಹ ಭಕ್ತರಿಗೆ ಅನುಕೂಲವಾಗಲೆಂದು ಸಾಲುಮರದ ವೆಂಕಟೇಶ್ ಅವರು ಹಮ್ಮಿ ಕೊಂಡಿರುವ ಪರಿಸರ ಕಾಯಕ ಮೆಚ್ಚುವಂಥದ್ದು , ಗಿಡಗಳು ಬೆಳೆದು ಶ್ರೀಕ್ಷೇತ್ರವು ಹಚ್ಚ ಹಸಿರಿನಿಂದ ಕಂಗೊಳಿಸಲಿ’ ಎಂದು ಆಶಿಸಿದರು.

ADVERTISEMENT

 ಟ್ರಸ್ಟ್ ಸಂಸ್ಥಾಪಕ ಸಿ.ಎಂ.ವೆಂಕಟೇಶ್ ಮಾತನಾಡಿ,  ಎಲ್ಲ ಕಡೆ ಸಾಲು ಗಿಡಗಳನ್ನು ಆಗಾಗ್ಗೆ  ನೆಟ್ಟು ಪೋಷಣೆ ಉತ್ತಮ.  ಬೆಟ್ಟದಲ್ಲಿ ನಮ್ಮ ಟ್ರಸ್ಟ್  300 ಸಾಲು ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಈಗ 100  ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಮಲೆ ಮಹದೇಶ್ವರ ಕ್ಷೇತರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಮಾತನಾಡಿ, ಕ್ಷೇತ್ರದಲ್ಲಿ ಹೆಚ್ಚು ಸಾಲು ಗಿಡಗಳನ್ನು ನೆಡುವುದರಿಂ ಭಕ್ತರಿಗೆ ನೆರಳನ್ನು ನೀಡುವಂತಾಗುತ್ತದೆ. ಸಾಲು ಗಿಡಗಳನ್ನು ಪೋಷಣೆ ಮಾಡುತ್ತಿರುವ ವೆಂಕಟೇಶ್ ಅವರಿಗೆ ಪ್ರಾಧಿಕಾರದಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

 ಪ್ರಾಧಿಕಾರ ಉಪಕಾರ್ಯದರ್ಶಿ ಚಂದ್ರಶೇಖರ್, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತರು ಸ್ವಾಮಿ ಪೊನ್ನಾಚಿ, ರವಿಕುಮಾರ್, ಎ. ಸುಬ್ರಹ್ಮಣ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.