ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿಗೆ ಬೆನಕನ ಅಮಾವಾಸ್ಯೆಯ ಪ್ರಯುಕ್ತ ಶನಿವಾರ ವಿಜೃಂಭಣೆಯ ಕುಂಭಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು.
ಬೇಡಗಂಪಣ ಸರದಿ ಅರ್ಚಕರು ನುಸುಕಿನ ವೇಳೆಯಲ್ಲಿ ಮಾದೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಗಂದಾಭಿಷೇಕ, ಪುಷ್ಷಭಿಷೇಕ, ಮಹಾ ಮಂಗಳಾರತಿ ಸೇವೆಯನ್ನು ನೆರವೇರಿಸಿದ ಬಳಿಕ ಭಕ್ತರ ಧರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಬೇಡಗಂಪಣ ಸಮುದಾಯದ 101 ಅರ್ಚಕರು ಶ್ರಾವಣ ಮಾಸದ ಮೊದಲ ಕುಂಬಾಭಿಷೇಕ ನೆರವೇರಿತು. ಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಶ್ರಾವಣ ಮಾಸದ ಕೊನೆಯ ದಿನ ಮಾದೇಶ್ವರ ಸ್ವಾಮಿಗೆ ಕುಂಭಾಭಿಷೇಕ ನೆರವೇರಿಸುವುದು ಹಿಂದಿನಿಂದ ವಾಡಿಕೆಯಾಗಿ ಬಂದಿದೆ. ಬೇಡಗಂಪಣ ಸಮುದಾಯದ 101 ಅರ್ಚಕರು ಉಪವಾಸವಿದ್ದು, ಮಜ್ಜನದ ಬಾವಿ ಬಳಿ ಬಿಂದಿಗೆಗಳನ್ನು ಒಂದೆಡೆ ಇರಿಸಿ, ಜೊತೆಯಲ್ಲಿ ಎಳನೀರನ್ನು ಒಂದೆಡೆ ಇರಿಸಿ, ಮಂತ್ರ ಘೋಷ ಸಮೇತ ಪೂಜೆ ನೆರವೇರಿಸಿದರು. ನಂತರ ಮಜ್ಜನರ ಬಾವಿಗೆ ಗಂಗಾ ಪೂಜೆ ನೆರವೇರಿಸಿ, 101 ಬಿಂದಿಗೆಗೂ ಜಲ ತುಂಬಿಸಿದರು. ಬಳಿಕ ಅಲ್ಲಿಂದ ಛತ್ರಿ ಚಾಮರಗಳನ್ನು ಒಳಗೊಂಡು, ಮಂಗಳ ವಾದ್ಯಗಳ ಸಮೇತ ಮೆರವಣಿಗೆಯಲ್ಲಿ ಎಳನೀರು ಹಾಗೂ ಜಲವನ್ನು ಹೊತ್ತು ತಂದು, ದೇವಾಲಯದ ಹೊರ ಆವರಣದಲ್ಲಿ ಪ್ರದಕ್ಷಿಣೆ ಹಾಕಿ, ದೇವಾಲಯದ ಒಳಭಾಗದಲ್ಲಿ ಒಂದೆಡೆ ಇರಿಸಿದರು. ಮತ್ತೆ ಪೂಜೆ ನೆರವೇರಿಸಿದ ಬಳಿಕ ಮಾದೇಶ್ವರ ಸ್ವಾಮಿಗೆ ಎಳನೀರು ಅಭಿಷೇಕ ಹಾಗೂ ಜಲಾಭಿಷೇಕ ಮಾಡಲಾಯಿತು.
ಶ್ರಾವಣ ಮಾಸದ ಮೊದಲನೇ ದಿನ ಹಾಗೂ ಶ್ರಾವಣ ಮಾಸದ ಕೊನೆಯ ದಿನ ಈ ಕುಂಭಾಬಿಷೇಕ ನಡೆಯುತ್ತದೆ. ಈ ಒಂದು ತಿಂಗಳು ಮಾದೇಶ್ವರ ಸ್ವಾಮಿಗೆ ತ್ರಿಕಾಲ ಪೂಜೆಯೂ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.