ADVERTISEMENT

ಮಹದೇಶ್ವರ ಬೆಟ್ಟ: ಕಸ ಹಾಕುವ ಜಾಗದಲ್ಲಿ ಚಿನ್ನದ ಕರಡಿಗೆ ಪತ್ತೆ!

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 12:00 IST
Last Updated 25 ಮಾರ್ಚ್ 2021, 12:00 IST
   

ಮಹದೇಶ್ವರ ಬೆಟ್ಟ: ನಾಪತ್ತೆಯಾಗಿದ್ದಮಲೆಮಹದೇಶ್ವರ ಸ್ವಾಮಿ ದೇವಾಲಯದ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಯ ಕರಡಿಗೆ ರಾಜಗೋಪುರದ ಮುಂಭಾಗ ಕಸ ಹಾಕುವ ಜಾಗದಲ್ಲಿ ಗುರುವಾರ ಪತ್ತೆಯಾಗಿದೆ.

ಮಧ್ಯಾಹ್ಯ 3.45ರ ಸುಮಾರಿಗೆ ದೇವಾಲಯದ ಹೊರಗುತ್ತಿಗೆ‌ ನೌಕರ ಸುನೀಲ್ ಕುಮಾರ್ ಎಂಬುವವರಿಗೆ ಕರಡಿಗೆ ಸಿಕ್ಕಿದೆ.

ತಕ್ಷಣ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಬೆಟ್ಟ ಠಾಣೆ ಇನ್ ಸ್ಪೆಕ್ಟರ್ ರಮೇಶ್, ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

'ದೇವರಿಗೆ ಧರಿಸಿದ್ದ ಚಿನ್ನದ ಕರಡಿಗೆಯು ತ್ಯಾಜ್ಯ ವಸ್ತು ಮಧ್ಯೆ‌ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡು ಮಹಜರು ಮಾಡುತ್ತಿದ್ದು ನಂತರ ದೇವಾಲಯಕ್ಕೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ' ಎಂದು ಜಯವಿಭವಸ್ವಾಮಿ ಹೇಳಿದ್ದಾರೆ.

ಪ್ರಕರಣ ಸುಖಾಂತ್ಯ‌ ಕಂಡಿದೆ. ಆದರೆ, ನಿರ್ಲಕ್ಷ್ಯತನದ ಬಗ್ಗೆ ಹಾಗೂ‌ ಬೇಜವಾಬ್ದಾರಿ ಬಗ್ಗೆ‌ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

30 ಗ್ರಾಂ ಚಿನ್ನದ ಕರಡಿಗೆ ವಾರದ ಹಿಂದೆ ನಾಪತ್ತೆಯಾಗಿತ್ತು. ಬುಧವಾರ ಪ್ರಾಧಿಕಾರದ ಕಾರ್ಯದರ್ಶಿ ಅವರು ಠಾಣೆಗೆ ದೂರು ನೀಡಿದ್ದರು.

ವಾರದ ನಂತರ ರಾಜಗೋಪುರದ ಬಳಿಯ ಕಸದ ರಾಶಿಯಲ್ಲಿ ಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಒಂದು ವಾರದಿಂದ ಕರಡಿಗೆ ಅಲ್ಲಿಯೇ ಬಿದ್ದಿರಲು ಸಾಧ್ಯವೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.