ADVERTISEMENT

ಮಹದೇಶ್ವರ ಬೆಟ್ಟ: ಗೋಪಿನಾಥಂ ಜಲಾಶಯದಲ್ಲಿ ತಾಯಿ, ಇಬ್ಬರು ಪುತ್ರಿಯರು ನೀರುಪಾಲು

ಬಟ್ಟೆ ತೊಳೆಯುತ್ತಿದ್ದಾಗ ದುರ್ಘಟನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 12:29 IST
Last Updated 5 ಏಪ್ರಿಲ್ 2024, 12:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಹದೇಶ್ವರ ಬೆಟ್ಟ (ಚಾಮರಾಜನಗರ): ಹನೂರು ತಾಲ್ಲೂಕಿನ ಗೋಪಿನಾಥಂ ಜಲಾಶಯದಲ್ಲಿ ಶುಕ್ರವಾರ ಬಟ್ಟೆ ತೊಳೆಯಲು ಹೋಗಿದ್ದ, ತಾಯಿ ಮತ್ತು ಇಬ್ಬರು ಪುತ್ರಿಯರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದೂರು ಗ್ರಾಮದ ಮೀನಾ (33) ಪವಿತ್ರ (13) ಕೀರ್ತಿ (11) ಮೃತಪಟ್ಟವರು.

ADVERTISEMENT

ಮೀನಾ ಅವರು ಪುತ್ರಿಯರಾದ ಪವಿತ್ರ, ಕೀರ್ತಿ ಮತ್ತು ಮಗ ಸುರೇಂದ್ರ ಅವರೊಂದಿಗೆ  ಶುಕ್ರವಾರ ಬೆಳಗ್ಗೆ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದರು. ಬಟ್ಟೆ ತೊಳೆದ ನಂತರ ಬಟ್ಟೆಗಳನ್ನು ಹಿಂಡಲು ನೀರಿಗೆ ಇಳಿದಾಗ, ಮೀನಾ ಆಕಸ್ಮಿಕವಾಗಿ ಕಾಲು ಜಾರಿಬಿದ್ದರು. ಹೆಣ್ಣು ಮಕ್ಕಳಾದ ಪವಿತ್ರ ಮತ್ತು ಕೀರ್ತಿ ತಾಯಿಯ ರಕ್ಷಣೆಗೆ ಹೋದಾಗ, ಅವರು ಕೂಡ ಮುಳುಗಿದರು.

ಸ್ಥಳದಲ್ಲಿಯೇ ಇದ್ದ ಮಗ ಸುರೇಂದ್ರ ತಂದೆಗೆ ವಿಷಯ ತಿಳಿಸಿ ಕರೆದುಕೊಂಡು ಬರುವಷ್ಟರಲ್ಲಿ ಮೂವರು ನೀರು ಪಾಲಾಗಿದ್ದರು. ನಂತರ ಗ್ರಾಮಸ್ಥರ ಸಹಾಯದಿಂದ ಮೂವರ ಶವವನ್ನು ಹೊರ ತೆಗೆಯಲಾಯಿತು. ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.