ADVERTISEMENT

ಸಂತೇಮರಹಳ್ಳಿ | ಪೂಜೆ ನೆಪದಲ್ಲಿ ಹಣ, ಮಾಂಗಲ್ಯ ಸರ ದೋಚಿದವನ ಬಂಧನ 

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:23 IST
Last Updated 30 ಆಗಸ್ಟ್ 2025, 7:23 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಸಂತೇಮರಹಳ್ಳಿ: ಸಮೀಪದ ಯಲಕ್ಕೂರು ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಂಚಿಸಿ ಚಿನ್ನದ ಸರ ದೋಚಿದ್ದ ಆರೋಪಿ ಗುಂಡ್ಲುಪೇಟೆ ಪಟ್ಟಣ್ಣದ ಮುತ್ತಣ್ಣ ಆಲಿಯಾಸ್ ಚಂದ್ರು ಎಂಬಾತನನ್ನು ‌ಕುದೇರು ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ADVERTISEMENT

ಗ್ರಾಮದ ಕಲ್ಯಾಣಕುಮಾರಿ ಸರ ಕಳೆದುಕೊಂಡವರು. ಆರೋಪಿ ಶಾಸ್ತ್ರ ಹೇಳುವ ನೆಪದಲ್ಲಿ ಕಲ್ಯಾಣಕುಮಾರಿ ಅವರನ್ನು ಪರಿಚಯ ಮಾಡಿಕೊಂಡಿದ್ದ. ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಿಕೊಡುತ್ತೇನೆ ಎಂದು ₹ 15 ಸಾವಿರ ಪಡೆದುಕೊಂಡ ನಂತರ ಮನೆಯಲ್ಲಿ ಪೂಜೆ ಮಾಡಬೇಕು ಅದಕ್ಕೆ ಮಾಂಗಲ್ಯ ಸರವನ್ನು ಪೂಜೆಯಲ್ಲಿ ಇಡಬೇಕೆಂದು ತಿಳಿಸಿದ್ದ. ಕಲ್ಯಾಣಕುಮಾರಿ ಅವರಿಗೆ ಮೂರ್ಛೆ ಹೋಗುವ ಔಷಧಿಯನ್ನು ಸಿಂಪಡಿಸಿ 33 ಗ್ರಾಮ ತೂಕದ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದ.

ಈ ಸಂಬಧ ಕುದೇರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧವಾಗಿ ಎಎಸ್‌ಐ ಎಸ್.ಚಂದ್ರಶೇಖರ್, ಆಲಿಖಾನ್, ಉಮೇಶ್ ನೇತೃತ್ವ ತಂಡ ಶುಕ್ರವಾರ ಎಚ್.ಡಿ.ಕೋಟೆಯಲ್ಲಿ ಆರೋಪಿಯನ್ನು ಬಂಧಿಸಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕುದೇರು ಠಾಣೆ ಪಿಎಸ್‌ಐ ಕುಮುದಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.