ADVERTISEMENT

ಗಡಿ ಜಿಲ್ಲೆಯ ದೇವಾಲಯಗಳಲ್ಲಿ ಇನ್ನು ಕನ್ನಡದಲ್ಲಿ ಮಂತ್ರ: ಆದೇಶ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅರ್ಚಕರ ಸಭೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:50 IST
Last Updated 6 ಮಾರ್ಚ್ 2020, 19:50 IST
ಡಾ.ಎಂ.ಆರ್‌.ರವಿ 
ಡಾ.ಎಂ.ಆರ್‌.ರವಿ    

ಚಾಮರಾಜನಗರ: ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ, ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಇನ್ನು ಮುಂದೆ ಕನ್ನಡದಲ್ಲಿ ಮಂತ್ರಗಳ ಉಚ್ಚಾರಣೆ ಕೇಳಿ ಬರಲಿದೆ.

ದೇವಾಲಯಗಳಲ್ಲಿ ನಿತ್ಯ ನಡೆಯುವ ಧಾರ್ಮಿಕ ವಿಧಿಗಳನ್ನು ಕನ್ನಡದಲ್ಲೇ ಮಾಡಬೇಕು ಎಂದು ಸೂಚಿಸಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.ಈ ವಿಚಾರಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿ ರವಿ ಅವರು ಮಾರ್ಚ್‌ 3ರಂದು ಇಲಾಖೆಯ ಅಧಿಕಾರಿಗಳು ಹಾಗೂ ಅರ್ಚಕರ ಸಭೆ ನಡೆಸಿದ್ದರು.

‘ಮಂತ್ರೋಚ್ಚಾರಣೆ, ಅರ್ಚನೆ, ಸಂಕಲ್ಪ ಸೇರಿದಂತೆ ಪೂಜಾ ವಿಧಿಗಳನ್ನು ಚಾಲ್ತಿಯಲ್ಲಿರುವ ಸಂಪ್ರದಾಯ ಹಾಗೂ ಧಾರ್ಮಿಕ ಪದ್ಧತಿಗಳಿಗೆ ಧಕ್ಕೆ ಬರದಂತೆ ಕನ್ನಡದಲ್ಲಿ ನೆರವೇರಿಸಬೇಕು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ಸಭೆಯಲ್ಲಿ ಈ ವಿಷಯ ಪ‍್ರಸ್ತಾಪ ಮಾಡಿದಾಗ ಎಲ್ಲರೂ ಒಪ್ಪಿದರು. ಸಂಸ್ಕೃತದಿಂದ ಕನ್ನಡಕ್ಕೆ ಮಂತ್ರಗಳನ್ನು ತರ್ಜುಮೆ ಮಾಡಲು ಕಷ್ಟವಾದರೆ, ಅರ್ಚಕರಿಗೆ ಅಗತ್ಯ ತರಬೇತಿ ಕೊಡುವುದಕ್ಕೂ ನಾವು ಸಿದ್ಧರಿದ್ದೇವೆ’ ಎಂದು ಡಾ. ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.