ADVERTISEMENT

ತೇರಿನ ಉತ್ಸವ: ಮೊದಲ ದಿನವೇ ₹2.07 ಲಕ್ಷ ಆದಾಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 14:25 IST
Last Updated 17 ಅಕ್ಟೋಬರ್ 2021, 14:25 IST
ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಚಿನ್ನದ ರಥೋತ್ಸವ ನಡೆಯಿತು. 57 ಭಕ್ತರು ಚಿನ್ನದ ತೇರಿನ ಉತ್ಸವದ ಸೇವೆ ಸಲ್ಲಿಸಿದರು
ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಚಿನ್ನದ ರಥೋತ್ಸವ ನಡೆಯಿತು. 57 ಭಕ್ತರು ಚಿನ್ನದ ತೇರಿನ ಉತ್ಸವದ ಸೇವೆ ಸಲ್ಲಿಸಿದರು   

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಲು ಭಕ್ತರಿಗೆ ಅವಕಾಶ ಕಲ್ಪಿಸಿದ ಮೊದಲ ದಿನವೇ (ಭಾನುವಾರ) ಹಲವು ಭಕ್ತರು ಚಿನ್ನದ ತೇರು ಸೇರಿದಂತೆ ವಿವಿಧ ತೇರಿನ ಉತ್ಸವಗಳನ್ನು ನಡೆಸಿದ್ದು, ₹2.07 ಲಕ್ಷ ಆದಾಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಂದಿದೆ.

ಭಾನುವಾರ ರಾತ್ರಿ 57 ಮಂದಿ ಚಿನ್ನದ ರಥೋತ್ಸವ ಸೇವೆಯನ್ನು ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದರಿಂದಲೇ ₹1.71 ಲಕ್ಷ ಸಂಗ್ರಹವಾಗಿದೆ.

98 ಭಕ್ತರು ಹುಲಿವಾಹನ ಸೇವೆ (₹29,400), 21 ಮಂದಿ ಬಸವ ವಾಹನ ಸೇವೆ (₹6,300) ಹಾಗೂ ಇಬ್ಬರು ರುದ್ರಾಕ್ಷಿ ವಾಹನ (₹600) ಸೇವೆ ಮಾಡಿಸಿದ್ದಾರೆ.

ADVERTISEMENT

556 ಭಕ್ತರಿಂದ ಮುಡಿಸೇವೆ: ಭಾನುವಾರ 556 ಭಕ್ತರು ಮಾದಪ್ಪನಿಗೆ ತಮ್ಮ ಮುಡಿಯನ್ನು ಅರ್ಪಿಸಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ ₹27,800 ಆದಾಯ ಬಂದಿದೆ. 1.300 ಕೆಜಿಯಷ್ಟು ಉದ್ದನೆಯ ಕೂದಲು ಸಂಗ್ರಹವಾಗಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.