ಮಹದೇಶ್ವರ ಬೆಟ್ಟ: ಬೆಟ್ಟದ ರಂಗಮಂದಿರ ಆವರಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್ ಜಿಲ್ಲೆಯಲ್ಲಿ ಹಲವಾರು ಕಲಾ ಪ್ರಕಾರಗಳು ಜೀವಂತವಾಗಿದ್ದು , ಆಗಾಗ ವೇದಿಕೆಯನ್ನು ಕಲ್ಪಿಸಿದರೆ ನಾಡಿನ ಕಲೆಯನ್ನು ಪ್ರದರ್ಶನ ಮಾಡಿ, ಕಲೆಗಾರನ್ನು ಪ್ರೋತ್ಸಾಹಿಸಬಹುದು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ವರ್ಷದಲ್ಲಿ ಎರಡು ಮೂರು ಬಾರಿ ವೇದಿಕೆಯನ್ನು ಕಲ್ಪಿಸಿದರೆ ಉತ್ತಮ ಎಂದರು.
ಜನಪದ ಕಲೆಗಳನ್ನು ಉಳಿವಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಕ್ರಮ ವಹಿಸಿ ಹೆಚ್ಚು ಅನುದಾನ ನೀಡಬೇಕು ಗಡಿ ಭಾಗದ ಶಾಸಕರು ಕನ್ನಡವನ್ನು ಉಳಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಮಾತನಾಡಿ, ಜಿಲ್ಲೆಯಲ್ಲಿ ಜಾನಪದ, ಮಾದೇಶ್ವರ ಸಿದ್ದಪ್ಪಾಜಿ, ಮಂಟೇಸ್ವಾಮಿಯ ಕ ಕಲಾರೂಪಗಳು ಜನರ ನಡುವೆ ಉಳಿದಿವೆ. ಕೇರಳದ ಕಾಸರಗೋಡು, ಮಹಾರಾಷ್ಟ್ರ, ಗೋವಾ ಪ್ರದೇಶಗಳಲ್ಲಿ ಉಳಿದಿರುವುದು ಕನ್ನಡಿಗರಿಗೆ ಪ್ರಾಧಿಕಾರ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಹನೂರು ತಹಶೀಲ್ದಾರ್ ಚೈತ್ರಾ, ರಾಜಸ್ವ ನಿರೀಕ್ಷಕ ಶಿವಕುಮಾರ್, ಗ್ರಾಮ ಲೆಕ್ಕಾಧಿಕಾರಿ ವಿನೋದ್, ವಿವಿಧ ಕಲಾತಂಡಗಳ ಕಲಾವಿದರು, ಗ್ರಾಮಸ್ಥರು ಭಾಗವಹಿಸಿದ್ದರು.
‘63 ತಾಲ್ಲೂಕುಗಳ ವ್ಯಾಪ್ತಿ’
ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ ‘ 2010ರಲ್ಲಿ ಪ್ರಾರಂಭವಾದ ಪ್ರಾಧಿಕಾರ ಸುಮಾರು 63 ತಾಲ್ಲೂಕುಗಳ ಗಡಿಭಾಗಗಳಲ್ಲಿ ವ್ಯಾಪ್ತಿಯನ್ನುಹೊಂದಿದೆ. ಅಲ್ಲಿರುವ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾಸರಗೋಡು ಜಿಲ್ಲೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಾಂಸ್ಕೃತಿಕ ಭವನವನ್ನು ನಿರ್ಮಿಸಲಾಗಿದೆ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.