ADVERTISEMENT

ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 16:36 IST
Last Updated 1 ಸೆಪ್ಟೆಂಬರ್ 2024, 16:36 IST
ಎಣ್ಣೆ ಮಜ್ಜನದ ಪ್ರಯುಕ್ತವಾಗಿ ವಿವಿಧ ಸೇವೆಯಲ್ಲಿ ಪಾಲ್ಗೊಂಡಿದ್ದ ಭಕ್ತರು
ಎಣ್ಣೆ ಮಜ್ಜನದ ಪ್ರಯುಕ್ತವಾಗಿ ವಿವಿಧ ಸೇವೆಯಲ್ಲಿ ಪಾಲ್ಗೊಂಡಿದ್ದ ಭಕ್ತರು   

ಮಹದೇಶ್ವರ ಬೆಟ್ಟ: ಎಣ್ಣೆ ಮಜ್ಜನದ ಪ್ರಯುಕ್ತ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ, ವಿವಿಧ ಸೇವೆ ನಡೆದಿದ್ದು, ಸಾವಿರಾರು ಭಕ್ತರು ಬಾಗಿಯಾದರು.

 ಎಣ್ಣೆ ಮಜ್ಜನ ಸೇವೆ ಪ್ರಯುಕ್ತ ಮುಂಜಾನೆಯಿಂದ ಅರ್ಚಕರು ಬಿಲ್ವಾರ್ಚನೆ, ಅಭೀಷೇಕ, ಮಂಗಳಾರತಿ ಬೆಳಗಿದರು. ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಹುಲಿವಾಹನ ಸೇವೆ, ಬಸವ ವಾಹನ, ರುದ್ರಾಕ್ಷಿ ಮಂಟಪ, ಬೆಳ್ಳಿ ರಥೋತ್ಸವ, ಚಿನ್ನದ ರಥೋತ್ಸವ, ಪಂಜಿನ ಸೇವೆ, ಉರುಳು ಸೇವೆ, ಇನ್ನಿತರ  ಸೇವೆಯಲ್ಲಿ ಪಾಲ್ಗೊಂಡು ಮಾದಪ್ಪನಿಗೆ ಹೊತ್ತಿದ್ದ ಹರಕೆ ಹಾಗೂ ಕಾಣಿಕೆ ಮುಡಿಗೇರಿಸಿದರು.

  ಧರ್ಮ ಧರ್ಶನವಲ್ಲದೆ ₹100, ₹300, ₹500 ವಿಶೇಷ ಸರತಿ ಸಾಲಿನ ವ್ಯವಸ್ಥೆ ಹಾಗೂ ನಿರಂತರ ಅನ್ನ ದಾಸೋಹ ವ್ಯವಸ್ಥೆ ಮತ್ತು ಪ್ರಾಧಿಕಾರದಿಂದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಕಲ್ಪಿಸಿಕೊಡಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.