ADVERTISEMENT

ಹನೂರು ತಾಲ್ಲೂಕಿನ ಕೌಳಿಹಳ್ಳ ಕಟ್ಟೆ ಡ್ಯಾಂನಲ್ಲೊಂದು ಕರುಣಾಜನಕ ಕಥೆ

ಹನೂರು: ಅಣ್ಣ–ತಂಗಿಯರ ಗೋಳು ಕೇಳೋರ‍್ಯಾರು?

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 20:30 IST
Last Updated 12 ಸೆಪ್ಟೆಂಬರ್ 2020, 20:30 IST
ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೌಳ್ಳಿಹಳ್ಳ ಕಟ್ಟೆ ಡ್ಯಾಂನಲ್ಲಿ ಅಣ್ಣ ತಂಗಿ ವಾಸವಿರುವ ಮನೆಯೊಳಗೆ ಅಸ್ತವ್ಯಸ್ತವಾಗಿ ಬಿದ್ದಿರುವ ಸಾಮಾಗ್ರಿಗಳು
ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೌಳ್ಳಿಹಳ್ಳ ಕಟ್ಟೆ ಡ್ಯಾಂನಲ್ಲಿ ಅಣ್ಣ ತಂಗಿ ವಾಸವಿರುವ ಮನೆಯೊಳಗೆ ಅಸ್ತವ್ಯಸ್ತವಾಗಿ ಬಿದ್ದಿರುವ ಸಾಮಾಗ್ರಿಗಳು   
""

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಕೌಳಿಹಳ್ಳಕಟ್ಟೆ ಡ್ಯಾಂನಲ್ಲಿ, ವಯೋವೃದ್ಧ ಅಂಗವಿಕಲ ಅಣ್ಣ ತಂಗಿಯರು ಹಲವು ವರ್ಷಗಳಿಂದ ನಿಷ್ಕೃಷ್ಟ ‌ಜೀವನ ನಡೆಸುತ್ತಿದ್ದಾರೆ.

ಇವರ ಪೋಷಕರು ತೀರಿ ಹೋಗಿ ದಶಕಗಳೇ ಉರುಳಿವೆ. ಒಡಹುಟ್ಟಿದವರೂ ಮೃತಪಟ್ಟಿದ್ದಾರೆ.35 ವರ್ಷಗಳ ಹಿಂದೆ ಕಟ್ಟಿ ಕೊಟ್ಟಮನೆಯ ಚಾವಣಿ ಸೋರುತ್ತಿದೆ. ಒಪ್ಪೊತ್ತಿನಊಟಕ್ಕೂಪರದಾಡುವಇವರು, ಇಲಿ, ಹೆಗ್ಗಣಗಳ ಜೊತೆವಾಸ ಮಾಡುವ ಪರಿಸ್ಥಿತಿ ಇದೆ.

ಕುಳಿತಲ್ಲಿಯೇಕುಳಿತುಕೊಂಡುತಾನಾಯಿತುತನ್ನಪಾಡಾಯಿತುಎಂಬಂತೆಕುಳಿತಿರುವ ವೃದ್ಧೆಯ ಹೆಸರುರಂಗಮ್ಮ. ವಯಸ್ಸು ‌70ರಆಸುಪಾಸು. ಅವರ ಅಣ್ಣನ ಹೆಸರು ಮಾರ.ವಯಸ್ಸು72. ಬುಡಕಟ್ಟು ಸಮುದಾಯಕ್ಕೆ ಸೇರಿರುವ ಇವರು ಹುಟ್ಟಿನಿಂದ ಅಂಗವಿಕಲರು. ಮದುವೆಯಾಗಿಲ್ಲ. ಎರಡುದಶಕಗಳಹಿಂದೆಪೋಷಕರಿಬ್ಬರು ಕಾಲವಾದ ನಂತರ ಇಬ್ಬರ ಬದುಕುನರಕಯಾತನೆಯಾಗಿದೆ.

ADVERTISEMENT

ಒಪ್ಪತ್ತಿನಊಟಕ್ಕೂಬೇರೆಯವರನ್ನೇಕಾಯಬೇಕಾಗಿರುವಇವರುಗ್ರಾಮದಲ್ಲಿಕಾಡುಪ್ರಾಣಿಗಳಿಗೂಕಡೆಯದಾದ ಬದುಕು ನಡೆಸುತ್ತಿದ್ದಾರೆ.ಬಿಳಿಗಿರಿರಂಗನಾಥಹುಲಿಸಂರಕ್ಷಿತ ಪ್ರದೇಶದಕಾಡಂಚಿನಗ್ರಾಮದಲ್ಲಿವಾಸವಿದ್ದಾರೆ. ಬುಡಕಟ್ಟು ಜನರೇವಾಸವಿರುವಈಊರಿನಲ್ಲಿಒಂದಿಷ್ಟುಅಭಿವೃದ್ಧಿಕಾರ್ಯಗಳುಆಗಿವೆ. ಆದರೆ ಈಕುಟುಂಬಮಾತ್ರಪ್ರತಿ ನಿತ್ಯಇಲಿ,ಹೆಗ್ಗಣ,ಬೆಕ್ಕು, ಚೇಳುಗಳಮಧ್ಯೆವಾಸವಾಗಿದೆ.

ಅಣ್ಣ ತಂಗಿಯರು ವಾಸವಿರುವ ಮನೆ

ವೃದ್ಧಾಪ್ಯವೇತನ ಸಿಗುತ್ತಿಲ್ಲ. ಪಡಿತರಚೀಟಿಮಾತ್ರಮರೀಚಿಕೆಯಾಗಿದೆ.ಇಬ್ಬರುಸ್ನಾನಮಾಡಿವರ್ಷವೇ
ಕಳೆದಿದೆ.ಬಟ್ಟೆಬದಲಾಯಿಸಿವರ್ಷಗಳುಉರುಳಿವೆ. ತಲೆಗೆಎಣ್ಣೆಕಂಡುದಶಮಾನಗಳೇಕಳೆದಿವೆ. ಸರಿಯಾಗಿ ಊಟವೂ ಸಿಗದೆ ಪರದಾಡುತ್ತಾರೆ. ಅನಾಥಆಗಿರುವಇಬ್ಬರಿಗೂಸರ್ಕಾರಸರಿಯಾದರೀತಿಯಲ್ಲಿನಿಗಾ ವಹಿಸಲಿ ಎಂದುಸ್ಥಳೀಯರುಆಗ್ರಹಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ ಅವರು, ‘ಕೌಳಿಹಳ್ಳ ಕಟ್ಟೆ ಡ್ಯಾ ಬಳಿ ಅಣ್ಣತಂಗಿಯರಿಬ್ಬರು ಜೀವನ ನಡೆಸಲು ಕಷ್ಟಪಡುತ್ತಿರುವ ಬಗ್ಗೆ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ವಾಸ್ತವದ ಬಗ್ಗೆ ವರದಿ ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಇಲಾಖೆ ವತಿಯಿಂದ ಸಿಗುವ ಸೌಲಭ್ಯವನ್ನು ಅವರಿಗೆ ಕೊಡಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.