ADVERTISEMENT

ಉದ್ಯೋಗ ಮೇಳ: 123 ಮಂದಿ ಆಯ್ಕೆ

21 ಕಂಪನಿಗಳು ಭಾಗಿ; 418 ಮಂದಿ ಉದ್ಯೋಗ ಆಕಾಂಕ್ಷಿಗಳು ನೋಂದಣಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 3:25 IST
Last Updated 14 ಆಗಸ್ಟ್ 2021, 3:25 IST
ಉದ್ಯೋಗ ಮೇಳದಲ್ಲಿ ಆಯ್ಕೆಯಾದವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರು ಉದ್ಯೋಗ ಪತ್ರ ನೀಡಿದರು
ಉದ್ಯೋಗ ಮೇಳದಲ್ಲಿ ಆಯ್ಕೆಯಾದವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರು ಉದ್ಯೋಗ ಪತ್ರ ನೀಡಿದರು   

ಚಾಮರಾಜನಗರ:ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಕಚೇರಿಗಳ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಮಿನಿ ಉದ್ಯೋಗ ಮೇಳದಲ್ಲಿ 123 ಮಂದಿ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.

ಎರಡು ದಿನಗಳ ಅವಧಿಯಲ್ಲಿ ಒಟ್ಟು 418 ಮಂದಿ ಉದ್ಯೋಗ ಆಕಾಂಕ್ಷಿಗಳು ಮೇಳದಲ್ಲಿ ನೋಂದಣಿ ಮಾಡಿಕೊಂಡಿದ್ದರು.ಪೇಟಿಎಂ, ರಾನೆ, ಸಾತ್ವಿಕ್, ಯಂಗ್ ಇಂಡಿಯಾ ಫೌಂಡೇಶನ್, ಅಪೋಲೋ ಹೋಂ ಹೆಲ್ತ್‌ ಕೇರ್ , ಜೆಕೆ ಟೈರ್ಸ್‌, ಯೂತ್ ಜಾಬ್ಸ್, ಟೆಕ್ನೋ ಟಾಸ್ಕ್ಸ್, ಇನ್‌ ಸ್ಟ್ಯಾಂಟ್‌ ಐ.ಟಿ.ಟೀಚ್, ವಿ.ಜಿ.ಬಿ, ರಾಜ್ ಬಯೋ, ಕಾವೇರಿ ಅಸೋಸಿಯೇಟ್ಸ್, ಪೀಪಲ್‌ ಮ್ಯಾನೇಜ್‌ಮೆಂಟ್‌ ಸರ್ವಿಸ್‌, ವೀವೇಕಾನಂದ ಯೂತ್‌ ಮೂವ್‌ಮೆಂಟ್‌, ದೀನಬಂಧು ಶಿಕ್ಷಣ ಸಂಸ್ಥೆ, ಐಸಿಐಸಿಐ, ಸನ್‌ ಬ್ಯುಸಿನೆಸ್‌ ಸೊಲ್ಯುಷನ್ಸ್‌ ಸೇರಿದಂತೆ 21 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.

ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಪದವಿ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಮಾಡಿದ್ದ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು.

ADVERTISEMENT

‘ಮಿನಿ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 123 ಮಂದಿ ಆಯ್ಕೆಯಾಗಿದ್ದು, ಕೆಲವರಿಗೆ ಕಂಪನಿಗಳು ಸ್ಥಳದಲ್ಲೇ ನೇಮಕಾತಿ ಪತ್ರ ನೀಡಿವೆ’ ಎಂದುಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯೋಗ ಅಧಿಕಾರಿ ಎ.ಮಹಮ್ಮದ್ ಅಕ್ಬರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ ಅವರು ಶುಕ್ರವಾರ ಪೀಪಲ್‌ ಮ್ಯಾನೇಜ್‌ಮೆಂಟ್‌ ಸರ್ವಿಸ್‌ ಸಂಸ್ಥೆ ಆಯ್ಕೆ ಮಾಡಿದ ಐವರು ಅಭ್ಯರ್ಥಿಗಳಿಗೆ ಉದ್ಯೋಗ ಪತ್ರವನ್ನು ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.