ಸಂತೇಮರಹಳ್ಳಿ: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿವಾರಣೆಗೆ ಚಳವಳಿ ಮೂಲಕ ಹೋರಾಟ ನಡೆಸಬೇಕಾಗಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ತಿಳಿಸಿದರು.
‘ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಟ್ರಸ್ಟ್ ಶುಕ್ರವಾರ ಇಲ್ಲಿ ಆಯೋಜಿಸಿದ್ದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ, ಟ್ರಸ್ಟ್ ಅಧ್ಯಕ್ಷ ಕೆ.ಎಂ.ನಾಗರಾಜು ನಿಧನದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸ್ಪೃಶ್ಯತೆ ಹಾಗೂ ಜಾತಿ ಆಚರಣೆ ನಿರ್ಮೂಲನೆಗಾಗಿ ಸವರ್ಣೀಯ ಬುದ್ಧಿಜೀವಿಗಳಿಂದ ಅವರಲ್ಲಿ ಅರಿವು ಮೂಡಿಸಬೇಕಿದೆ ಎಂದರು. ಸಂತೇಮರಹಳ್ಳಿ ಕೇಂದ್ರದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕೆ.ಎಂ.ನಾಗರಾಜು ಗುರಿಯಾಗಿತ್ತು. ಆದಷ್ಟು ಶೀಘ್ರ ಆನಾವರಣ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ತಿಳಿಸಿದರು.
ಚಾಮೂಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮುಖಂಡರಾದ ಎಚ್.ಸಿ.ಮಹೇಶ್ ಕುಮಾರ್, ಯರಿಯೂರು ರಾಜಣ್ಣ, ಮಾದೇಶ್, ರಾಜೇಂದ್ರ, ಸಿ.ಎಂ.ಕೃಷ್ಣಮೂರ್ತಿ, ರಾಮಸಮುದ್ರ ಸುರೇಶ್, ಉಮ್ಮತ್ತೂರು ಸೋಮಣ್ಣ, ನಿವೃತ್ತ ಕೃಷಿ ಅಧಿಕಾರಿ ನಾಗಣ್ಣ, ಕುದೇರು ಮಹದೇವಯ್ಯ, ನಾಗರಾಜು, ವೀರಭದ್ರಸ್ವಾಮಿ, ಜಯಶಂಕರ್, ಉಮ್ಮತ್ತೂರು ಪುಟ್ಟಸ್ವಾಮಿ, ಗಣಿಗನೂರು ನಾಗಯ್ಯ, ರುದ್ರಯ್ಯ, ಹೊಂಗನೂರು ಕೆಂಪರಾಜು, ಜನ್ನೂರು ಹೊಸೂರು ದೊರೆರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.