
ಗುಂಡ್ಲುಪೇಟೆ: ಪಟ್ಟಣ ಪುರಸಭೆಯಿಂದ ಪಶು ಸಂಗೋಪನೆ ಇಲಾಖೆ ಮತ್ತು ಪುರಸಭೆ ಸಹಯೋಗದೊಂದಿಗೆ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಯಿತು.
ಪಟ್ಟಣದ ಪುರಸಭೆ ಕಚೇರಿ ಮುಂದೆ ಪೌರಸೇವಾ ನೌಕರರು ಸೆರೆ ಹಿಡಿದು ತಂದಿದ್ದ ಬೀದಿ ನಾಯಿಗಳಿಗೆ ಪಶು ಸಂಗೋಪನೆ ಇಲಾಖೆ ವೈದ್ಯ ಡಾ.ನಾಗೇಂದ್ರಮೂರ್ತಿ ಲಸಿಕೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಶರವಣ ಮಾತನಾಡಿ, ‘ಪಟ್ಟಣದ ವ್ಯಾಪ್ತಿಯ ಆಯ್ದ ಭಾಗಗಳಲ್ಲಿ ಗುರುವಾರ ಹಿಡಿದು ತಂದಿದ್ದ ಬೀದಿ ನಾಯಿಗಳಿಗೆ ಲಸಿಕೆ ಹಾಕಿದ್ದು, ಇದರಿಂದ ಸಂಭವನೀಯ ಅಪಾಯಗಳು ತಪ್ಪಲಿವೆ. ಲಸಿಕೆ ನೀಡಿಕೆ ಮುಂದುವರೆಸುವ ಜೊತೆಗೆ ಎಬಿಸಿ ಯೋಜನೆಯಡಿ ಬೀದಿ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನೀಡಲು ಟೆಂಡರ್ ಕರೆಯಲಾಗಿದೆ’ ಎಂದು ಮಾಹಿತಿ ನೀಡಿದರು.
ಆರೋಗ್ಯ ನಿರೀಕ್ಷಕ ಪರಮೇಶ್ವರಪ್ಪ, ಎಂಜಿನಿಯರ್ ಮಂಜುನಾಥ್, ಪೌರ ಸೇವಾ ನೌಕರರ ಮೇಸ್ತ್ರಿ ಮೂರ್ತಿ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.