ADVERTISEMENT

ಹನೂರು: ₹10 ಲಕ್ಷ ಮೌಲ್ಯದ ಶಾಲಾ ಮಕ್ಕಳ ಶೂ, ಬ್ಯಾಗ್‌ ವಶ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 5:42 IST
Last Updated 25 ಮಾರ್ಚ್ 2023, 5:42 IST
ಹನೂರಿನಲ್ಲಿ ವಶಪಡಿಸಿಕೊಳ್ಳಲಾದ ಶಾಲಾ ಬ್ಯಾಗ್‌ಗಳಲ್ಲಿ ನಿಶಾಂತ್‌ ಅವರ ಫೋಟೊ ಮುದ್ರಿಸಲಾಗಿದೆ.
ಹನೂರಿನಲ್ಲಿ ವಶಪಡಿಸಿಕೊಳ್ಳಲಾದ ಶಾಲಾ ಬ್ಯಾಗ್‌ಗಳಲ್ಲಿ ನಿಶಾಂತ್‌ ಅವರ ಫೋಟೊ ಮುದ್ರಿಸಲಾಗಿದೆ.   

ಹನೂರು: ಹನೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಸ್‌.ನಿಶಾಂತ್‌ ಅವರಿಗೆ ಸೇರಿದ್ದು ಎನ್ನಲಾದ ₹10 ಲಕ್ಷ ಮೌಲ್ಯದ ಶಾಲಾ ಮಕ್ಕಳ ಶೂಗಳು, ಶಾಲಾ ಚೀಲ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಚುನಾವಣಾ ಸೆಕ್ಟರ್‌ ಅಧಿಕಾರಿಗಳು ಗುರುವಾರ ಮಧ್ಯಾಹ್ನ ವಶಪಡಿಸಿಕೊಂಡಿದ್ದಾರೆ.

ಶಾಲಾ ಬ್ಯಾಗ್‌ಗಳ ಮೇಲೆ ನಿಶಾಂತ್‌ ಅವರ ಫೋಟೊ ಮುದ್ರಿಸಲಾಗಿದೆ. 1,710 ಜೊತೆ ಶೂಗಳು, 610 ಬ್ಯಾಗ್‌ಗಳು, ಎರಡು ಚೀಲದಲ್ಲಿ ಕೆಂಪು ಬಣ್ಣದ ಟವಲ್‌ಗಳು ಮತ್ತು 15 ಬೆಡ್‌ ಶೀಟ್‌ಗಳನ್ನು ವಶಪಡಿಸಿಕೊಂಡು ಹನೂರು ಪೊಲೀಸರಿಗೆ ಹಸ್ತಾಂತರಿಸಿದ್ದು, ಪ್ರಕರಣ ದಾಖಲಾಗಿದೆ.

45 ಸೀರೆ ವಶ: ಕ್ಷೇತ್ರ ವ್ಯಾಪ್ತಿಯ, ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಸಂಗ್ರಹಿಸಿದ್ದ 45 ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡರು.

ADVERTISEMENT

ಚಿಕ್ಕಮಗಳೂರು ವರದಿ: ಕಾರಿನಲ್ಲಿ ಸಾಗಿಸುತ್ತಿದ್ದ ₹ 3.5 ಲಕ್ಷ ನಗದನ್ನು ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಭಾಗದಲ್ಲಿ ಚುನಾವಣಾ ಸ್ಕ್ವಾಡ್‌ ತಂಡದವರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.