ADVERTISEMENT

ಸರ್ಕಾರಿ ಶಾಲಾ ಮಕ್ಕಳಿಗೆ ಟಿ ಶರ್ಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:17 IST
Last Updated 18 ಡಿಸೆಂಬರ್ 2025, 5:17 IST
ಹನೂರು ತಾಲೂಕಿನ ಶಾಗ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಕುಸುಮ ಕೆಂಚಪ್ಪ ಉಚಿತವಾಗಿ ಟಿಶರ್ಟ್‌ಗಳನ್ನು ವಿತರಿಸಿದರು
ಹನೂರು ತಾಲೂಕಿನ ಶಾಗ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಕುಸುಮ ಕೆಂಚಪ್ಪ ಉಚಿತವಾಗಿ ಟಿಶರ್ಟ್‌ಗಳನ್ನು ವಿತರಿಸಿದರು   

ಪ್ರಜಾವಾಣಿ ವಾರ್ತೆ

ಹನೂರು: ಸರ್ಕಾರಿ ಸೇವೆಗೆ ಸೇರಿದ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಮೊದಲನೇ ತಿಂಗಳ ಸಂಬಳದಲ್ಲಿ ತನ್ನೂರಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಟಿಶರ್ಟ್‌ಗಳನ್ನು ನೀಡಿದ್ದಾರೆ.

ಶಾಗ್ಯ ಗ್ರಾಮದ ಕುಸುಮ ಕೆಂಚಪ್ಪನವರು ಬೆಂಗಳೂರಿನಲ್ಲಿ ವಾಸವಿದ್ದು ಇದೀಗ ಬ್ಯಾಂಕ್ ಅಭಿವೃದ್ಧಿ ಅಧಿಕಾರಿಯಾಗಿ ಸರ್ಕಾರಿ ಕೆಲಸಕ್ಕೆ ಹಾಜರಾಗಿ ಮೊದಲ ತಿಂಗಳು ಬಂದ ಸಂಬಳದಿಂದ ಶಾಗ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 80ಕ್ಕೂ ಹೆಚ್ಚು ಮಕ್ಕಳಿಗೆ ಟಿಶರ್ಟ್ ನೀಡಿದರು.

ADVERTISEMENT

ಬಳಿಕ ಮಾತನಾಡಿದ ಅವರು, ಮಕ್ಕಳು ಎಲ್ಲರೂ ಚೆನ್ನಾಗಿ ಓದಿ, ಕೆಲವೇ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗುತ್ತಿದೆ. ಈ ಬಾರಿ ಶೇಕಡಾ ನೂರರಷ್ಟು ಫಲಿತಾಂಶ ಬರುವಂತೆ ತಾವೆಲ್ಲರೂ ಶ್ರಮವಹಿಸಿ, ನಮಗೂ ಶಾಲೆಗೆ ಮತ್ತಷ್ಟು ಕೊಡುಗೆ ನೀಡಲು ಮನಸ್ಸಾಗುತ್ತದೆ. ಮಕ್ಕಳು ಹಾಗೂ ಶಿಕ್ಷಕರು ಉತ್ತಮ ಫಲಿತಾಂಶದ ಕಡೆ ಗಮನ ಕೊಡಿ. ಮಕ್ಕಳು ಚೆನ್ನಾಗಿ ಓದಿ ತಮ್ಮ ತಂದೆ, ತಾಯಿ, ಬಂಧುಬಳಗದವರನ್ನು ಚೆನ್ನಾಗಿ ನೋಡಿಕೊಳ್ಳಿ. ಬದುಕಿನಲ್ಲಿ ಒಳ್ಳೆಯ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ತಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಎನ್ ಮಹಾದೇವ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಮಲ್ಲಪ್ಪ, ಪರಶಿವಮೂರ್ತಿ, ಮುತ್ತುರಾಜು, ಸಂಧ್ಯಾ, ಸುಜಾತಾ, ಸುಂದರಮ್ಮ ಹಾಗೂ ಕಾನ್‌ಸ್ಟೆಬಲ್‌ ಚಂದ್ರಶೇಖರ್ ಇದ್ದರು.