ADVERTISEMENT

ಕಲೆಯಲ್ಲಿ ಮನುತಾ ರಾಣಿ, ವಾಣಿಜ್ಯಕ್ಕೆ ಸಾತ್ವಿಕ್‌ ಪ್ರಥಮ

ದ್ವಿತೀಯ ಪಿಯುಸಿ ಫಲಿತಾಂಶ: ಕೊಳ್ಳೇಗಾಲ ವಿದ್ಯಾರ್ಥಿಗಳ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 16:51 IST
Last Updated 22 ಜುಲೈ 2021, 16:51 IST
ಮನುತಾ ರಾಣಿ, ಸಾತ್ವಿಕ್‌, ಮದನ್‌ಕುಮಾರ್‌
ಮನುತಾ ರಾಣಿ, ಸಾತ್ವಿಕ್‌, ಮದನ್‌ಕುಮಾರ್‌   

ಚಾಮರಾಜನಗರ: ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯ ಮಟ್ಟಿಗೆ ಕೊಳ್ಳೇಗಾಲ ಕಾಲೇಜುಗಳ ವಿದ್ಯಾರ್ಥಿಗಳು ಪಾರಮ್ಯ ಮೆರೆದಿದ್ದಾರೆ.

ಕೊಳ್ಳೇಗಾಲದ ವಾಸವಿ ಕಾಲೇಜಿನ ಮೂವರು ವಿದ್ಯಾರ್ಥಿಗಳು (ರೋಹಿತ್‌ ಗೌಡ, ರೇಫಾ ತನಿಯತ್‌ ಮತ್ತು ರಕ್ಷಿತ) ವಿಜ್ಞಾನ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದರೆ, ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳು ಕೂಡ ಕೊಳ್ಳೇಗಾಲದ ಕಾಲೇಜುಗಳಿಗೇ ಸೇರಿದ್ದಾರೆ.

600ಕ್ಕೆ 593 ಅಂಕಗಳನ್ನು (ಶೇ 98.8) ಗಳಿಸಿರುವ, ಎಸ್‌ವಿಕೆ ಬಾಲಕಿಯರಸರ್ಕಾರಿ ಪದವಿ ಪೂರ್ವ ಕಾಲೇಜಿನ ಮನುತಾರಾಣಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ.

ADVERTISEMENT

ವಾಸವಿ ಕಾಲೇಜಿನ ಸಾತ್ವಿಕ್‌ ಆರ್‌. ಅವರು 600ಕ್ಕೆ 599 ಅಂಕಗಳನ್ನು (ಶೇ 99.83) ಗಳಿಸಿ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪೂರ್ಣಾಂಕ ಗಳಿಸಿರುವ ವಾಸವಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಮೊದಲಿಗರಾದರೆ, ಚಾಮರಾಜನಗರದ ಸೇವಾ ಭಾರತಿ ಪಿಯು ಕಾಲೇಜಿನ ಮದನ್‌ ಕುಮಾರ್‌ ಅವರು 599 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.