ADVERTISEMENT

ಶಾರ್ಟ್ ಸರ್ಕಿಟ್‌: ಕಂಪ್ಯೂಟರ್‌, ಪೀಠೋಪಕರಣ ಭಸ್ಮ

​ಪ್ರಜಾವಾಣಿ ವಾರ್ತೆ
Published 13 ಮೇ 2025, 13:36 IST
Last Updated 13 ಮೇ 2025, 13:36 IST
ಕೊಳ್ಳೇಗಾಲ ಅಗ್ನಿಶಾಮಕ ದಳದ ಸಿಬ್ಬಂದಿ ಕೊಠಡಿಯಿಂದ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಹೊರ ತಂದು ನೀರು ಹಾಕಿ ಬೆಂಕಿಯನ್ನು ನಂದಿಸಿದರು
ಕೊಳ್ಳೇಗಾಲ ಅಗ್ನಿಶಾಮಕ ದಳದ ಸಿಬ್ಬಂದಿ ಕೊಠಡಿಯಿಂದ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಹೊರ ತಂದು ನೀರು ಹಾಕಿ ಬೆಂಕಿಯನ್ನು ನಂದಿಸಿದರು   

ಕೊಳ್ಳೇಗಾಲ: ಇಲ್ಲಿನ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯುತ್‌ ಶಾರ್ಟ್ ಸರ್ಕಿಟ್‌ನಿಂದ ಕಂಪ್ಯೂಟರ್ ಸೇರಿದಂತೆ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.

ಮಂಗಳವಾರ ಮುಂಜಾನೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ವಾಯುವಿಹಾರಿ ರಾಜಶೇಖರ್ ಅವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ಅಲ್ಲದೆ, ವಾಯುವಿಹಾರಿಗಳಾದ ಮನೋರಂಜನ್, ಸುನೀಲ್  ಸೇರಿದಂತೆ ಇತರರು ಕಾಲೇಜಿನ ಒಳಗೆ ಹೋಗಿದ್ದು, ಭೂಗೋಳ ಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರು. ಆದರೂ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ಪ್ರಯೋಗಾಲಯದಲ್ಲಿದ್ದ 7 ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಕುರ್ಚಿ, ಮೇಜುಗಳು, 50ಕ್ಕೂ ಹೆಚ್ಚು ಭೂಪಟಗಳು, ಅನೇಕ ಪುಸ್ತಕಗಳು ಸುಟ್ಟು ಕರಕಲಾಗಿವೆ.

ADVERTISEMENT

‘ಕಾಲೇಜು ತುಂಬಾ ಹಳೆಯದಾಗಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿರಬಹುದು’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಕಂದಸ್ವಾಮಿ, ಆರಾಧ್ಯ, ಪುಟ್ಟಸ್ವಾಮಿ, ಪ್ರದೀಪ್, ಜಗದೀಶ್, ಕಾಲೇಜಿನ ಪ್ರೊ. ಸುಂದರ ಮೂರ್ತಿ, ಸಿಬ್ಬಂದಿ ಮಹೇಶ್ ಇದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.