ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದ ಹುಂಡಿ ಎಣಿಕೆ ನಡೆದಿದ್ದು, ₹64.09 ಲಕ್ಷ ಸಂಗ್ರಹವಾಗಿದೆ.
ಶನಿವಾರ ಬೆಳಿಗ್ಗೆ ತಹಶೀಲ್ದಾರ್ ಬಸವರಾಜು ಹಾಗೂ ಮಠಾಧೀಶ ಜ್ಞಾನನಂದ ರಾಜೇ ಅರಸ್ ನೇತೃತ್ವದಲ್ಲಿ ಹಳೇ ಮಠದ 2 ಹುಂಡಿ ಹಾಗೂ ಸಿದ್ದಪ್ಪಾಜಿ ದೇವಸ್ಥಾನದ 6 ಹುಂಡಿಗಳ ಎಣಿಕೆ ಕಾರ್ಯ ನಡೆದಿದೆ. ಹತ್ತು ತಿಂಗಳ ಬಳಿಕ ಹುಂಡಿ ಎಣಿಕೆ ನಡೆದಿದೆ ಗ್ರಾಮಾಂತರ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಉಪ ತಹಶೀಲ್ದಾರ್ ವಿಜಯಕುಮಾರ್, ಕಂದಾಯಾಧಿಕಾರಿ ರಂಗಸ್ವಾಮಿ, ಎಸ್‌ಬಿಐ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.