
ಸಂತೇಮರಹಳ್ಳಿ: ಸಮೀಪದ ತೆಳ್ಳನೂರು ಗ್ರಾಮದಲ್ಲಿ ಬಣ್ಣಾರಿ ಅಮ್ಮನ್ ಕಬ್ಬು ಕಾರ್ಖಾನೆ ವತಿಯಿಂದ ಕಬ್ಬು ಬೇಸಾಯದ ಬಗ್ಗೆ ಈಚೆಗೆ ಅರಿವು ಮೂಡಿಸಲಾಯಿತು.
ಕುಂತೂರು ಕಬ್ಬು ಕಾರ್ಖಾನೆ ಸಹಾಯಕ ವ್ಯವಸ್ಥಾಪಕ ಮಹದೇವಪ್ಪ ಮಾತನಾಡಿ, ಬೇಸಿಗೆ ಕಬ್ಬು ಬಿತ್ತನೆ ಮಾಡುವ ರೈತರಿಗೆ ₹10 ಸಾವಿರ ಸಹಾಯಧನ ನೀಡಲಾಗುವುದು. ಪ್ರತಿಯೊಬ್ಬ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರು ಬೆಳೆದ ಕಬ್ಬನ್ನು ಅವಧಿಗೂ ಮುನ್ನಾ ಕಟಾವು ಮಾಡಿಕೊಳ್ಳಲಾಗುವುದಾಗಿ ಭರವಸೆ ನೀಡಿದರು.
ರೈತ ಮುಖಂಡ ಅಶೋಕ್ ಮಾತನಾಡಿ, ಜುಲೈ ತಿಂಗಳಲ್ಲಿ ಕಬ್ಬು ನಾಟಿ ಮಾಡಿದ್ದಲ್ಲಿ ಅಧಿಕ ಇಳುವರಿ ಬರುತ್ತದೆ. ಜತೆಗೆ ಕಬ್ಬು ಕಟಾವಿಗೆ ಕಡಿಮೆ ವೆಚ್ಚವಿರುವುದರಿಂದ ರೈತರು ಲಾಭಾಂಶ ನಿರೀಕ್ಷೆ ಮಾಡಬಹುದು. ಕಾರ್ಖಾನೆ ಅಧಿಕಾರಿಗಳು ಸಣ್ಣ ಪುಟ್ಟ ವೆಚ್ಚಗಳಿಗೆ ಕಡಿವಾಣ ಹಾಕದೇ ಬೇಸಿಗೆಯಲ್ಲಿ ಅತ್ತುತ್ತಮ ಬಿತ್ತನೆ ನೀಡಿದ್ದಲ್ಲಿ ಅಧಿಕ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಬಹುದು. ಜತೆಗೆ ಅವಧಿಗೂ ಮುನ್ನಾ ಕಬ್ಬು ಕಟಾವು ಮಾಡುವಲ್ಲಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.
ಕುಂತೂರು ಸಕ್ಕರೆ ಕಾರ್ಖಾನೆ ಅಧಿಕಾರಿಗಳಾದ ಪ್ರಭುಸ್ವಾಮಿ, ವೆಂಕಟಾಚಲ, ರೈತರಾದ ಪ್ರತೀಶ್ ಕುಮಾರ್, ಗೋಪಿ, ಸೋಮಣ್ಣ, ದೊರೆಸ್ವಾಮಿ, ನಂಜುಂಡಶೆಟ್ಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.