ADVERTISEMENT

ಸಂತೇಮರಹಳ್ಳಿ: ರಸ್ತೆಯಲ್ಲಿ ಕಬ್ಬಿನ ಲಾರಿ ಪಲ್ಟಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 2:16 IST
Last Updated 30 ಸೆಪ್ಟೆಂಬರ್ 2025, 2:16 IST
 ಸಂತೇಮರಹಳ್ಳಿಯ ರೇವಮ್ಮ ಪುಟ್ಟಸುಬ್ಬಪ್ಪ ಕಲ್ಯಾಣ ಮಂಟಪದ ಬಳಿ ಇರುವ ಬೈಪಾಸ್ ರಸ್ತೆಯಲ್ಲಿ ಕಬ್ಬಿನ ಲಾರಿ ಪಲ್ಟಿಯಾಗಿರುವುದು.
 ಸಂತೇಮರಹಳ್ಳಿಯ ರೇವಮ್ಮ ಪುಟ್ಟಸುಬ್ಬಪ್ಪ ಕಲ್ಯಾಣ ಮಂಟಪದ ಬಳಿ ಇರುವ ಬೈಪಾಸ್ ರಸ್ತೆಯಲ್ಲಿ ಕಬ್ಬಿನ ಲಾರಿ ಪಲ್ಟಿಯಾಗಿರುವುದು.   

ಸಂತೇಮರಹಳ್ಳಿ: ಚಾಮರಾಜನಗರದ ರಸ್ತೆಯ ರೇವಮ್ಮ ಪುಟ್ಟಸುಬ್ಬಪ್ಪ ಕಲ್ಯಾಣ ಮಂಟಪದ ಬಳಿಯ ಬೈಪಾಸ್ ರಸ್ತೆಯಲ್ಲಿ ಸೋಮವಾರ ಕಬ್ಬಿನ ಲಾರಿ ಪಲ್ಟಿಯಾಗಿದೆ.

ಯಡಿಯೂರು ಗ್ರಾಮದಿಂದ ಮಂಡ್ಯದ ಸಕ್ಕರೆ ಕಾರ್ಖಾನೆಗೆ ನಿಗದಿಗಿಂತ ಹೆಚ್ಚು ತೂಕದ ಕಬ್ಬು ಹೊತ್ತೊಯ್ಯುತ್ತಿದ್ದ ಲಾರಿ ಏಕಾಏಕಿ ಪಲ್ಟಿಯಾಗಿದ್ದು  ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಬೈಪಾಸ್ ರಸ್ತೆಯಲ್ಲಿ ಅವಘಡ ಸಂಭವಿಸಿದ್ದು, ಯಾರಿಗೂ ಅಪಾಯವಾಗಿಲ್ಲ. ಲಾರಿ ಪಲ್ಟಿಯಿಂದ ಕೆಲಕಾಲ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT