ADVERTISEMENT

37 ಹೊಸ ಪ್ರಕರಣ, ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 16:29 IST
Last Updated 10 ಜುಲೈ 2021, 16:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 37 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 50 ಮಂದಿ ಗುಣಮುಖರಾಗಿದ್ದಾರೆ.

ಎರಡು ದಿನಗಳಿಂದ ಸಾವಿನ ಪ್ರಕರಣ ಹೆಚ್ಚಾಗಿದ್ದು, ಶನಿವಾರವೂ ಮೂವರು ಮೃತಪಟ್ಟಿದ್ದಾರೆ.

ಗುಣಮುಖರಾದವರ ಸಂಖ್ಯೆ ಸೋಂಕಿತರಿಗಿಂತ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 440ಕ್ಕೆ ಇಳಿದಿದೆ. 27 ಮಂದಿ ಐಸಿಯುನಲ್ಲಿ ಹಾಗೂ 23 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆ ಹಾಗೂ ಕೇರ್‌ ಕೇಂದ್ರಗಳಲ್ಲಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಇದುವರೆಗೆ 31,313 ಮಂದಿಗೆ ಕೋವಿಡ್‌ ಬಂದಿದೆ. 30,358 ಮಂದಿ ಗುಣಮುಖರಾಗಿದ್ದಾರೆ.

ಶನಿವಾರ 1,508 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,467 ಮಂದಿಗೆ ನೆಗೆಟಿವ್‌ ಆಗಿದೆ. 41 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಜಿಲ್ಲಾಡಳಿತ 37 ಪ್ರಕರಣಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

37 ಮಂದಿ ಸೋಂಕಿತರಲ್ಲಿ ಚಾಮರಾಜನಗರ ತಾಲ್ಲೂಕಿನ 16 ಮಂದಿ ಇದ್ದಾರೆ. ಗುಂಡ್ಲುಪೇಟೆಯ ಮೂವರು, ಕೊಳ್ಳೇಗಾಲದ ಆರು ಮಂದಿ, ಹನೂರಿನ ಒಂಬತ್ತು ಹಾಗೂ ಯಳಂದೂರು ತಾಲ್ಲೂಕಿನ ಮೂವರು ಸೇರಿದ್ದಾರೆ.

ಗುಣಮುಖರಾದ 50 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 24, ಗುಂಡ್ಲುಪೇಟೆಯ ಐವರು, ಕೊಳ್ಳೇಗಾಲದ ಆರು, ಹನೂರಿನ ಎಂಟು ಹಾಗೂ ಯಳಂದೂರು ತಾಲ್ಲೂಕಿನ ನಾಲ್ವರು ಮತ್ತು ಹೊರಜಿಲ್ಲೆಯ ಮೂವರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.