ADVERTISEMENT

ಗುಂಡ್ಲುಪೇಟೆ: ಮಧುಮಲೈ ಬಳಿ ಹುಲಿ ದಾಳಿಗೆ ಊಟಿ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 20:24 IST
Last Updated 24 ನವೆಂಬರ್ 2025, 20:24 IST
ನಾಗಿಯಮ್ಮ
ನಾಗಿಯಮ್ಮ   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿ ಕೊಂಡಿರುವ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸೋಮವಾರ ಹುಲಿ ದಾಳಿಗೆ ಮಹಿಳೆ ಮೃತಪಟ್ಟಿದ್ದಾರೆ.

ತಮಿಳುನಾಡಿನ ನೀಲಗಿರಿ (ಊಟಿ) ಜಿಲ್ಲೆಯ ಗೂಡ್ಲೂರು ತಾಲ್ಲೂಕಿನ ಮಾವನಹಳ್ಳ ಗ್ರಾಮದ ನಾಗಿಯಮ್ಮ (61) ಮೃತರು. ಮೇಕೆ ಮೇಯಿಸುವಾಗ ಹುಲಿ ಮಹಿಳೆಯನ್ನು ಎಳೆದೊಯ್ದಿದೆ.

ಇದೇ ಸ್ಥಳದಲ್ಲಿ 5 ತಿಂಗಳ ಹಿಂದೆ 2 ಹಸುಗಳನ್ನು ಹುಲಿ ಕೊಂದಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.