ADVERTISEMENT

ಬಂಡೀಪುರ: 4 ವಲಯಗಳಲ್ಲಿ ಹುಲಿಗಣತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 16:24 IST
Last Updated 22 ಜನವರಿ 2022, 16:24 IST
ಬಂಡೀಪುರದಲ್ಲಿ ಹುಲಿ ಗಣತಿಯ ಮೊದಲ ದಿನ ಸಿಬ್ಬಂದಿ ಹುಲಿಯ ಹೆಜ್ಜೆಯನ್ನು ಗುರುತಿಸಿ ವಿವರ ದಾಖಲಿಸಿದರು
ಬಂಡೀಪುರದಲ್ಲಿ ಹುಲಿ ಗಣತಿಯ ಮೊದಲ ದಿನ ಸಿಬ್ಬಂದಿ ಹುಲಿಯ ಹೆಜ್ಜೆಯನ್ನು ಗುರುತಿಸಿ ವಿವರ ದಾಖಲಿಸಿದರು   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರದಿಂದ ಹುಲಿ ಗಣತಿ ಆರಂಭವಾಗಿದ್ದು, ಮೊದಲ ಹಂತದಲ್ಲಿ ನಾಲ್ಕು ವಲಯಗಳಲ್ಲಿ ನಡೆಯಿತು.

ಬಂಡೀಪುರ, ಗೋಪಾಲಸ್ವಾಮಿಬೆಟ್ಟ, ಕುಂದುಕೆರೆ ಮತ್ತು ಮದ್ದೂರು ವಲಯಗಳಲ್ಲಿ ಸಿಬ್ಬಂದಿ ಎಂ–ಸ್ಟ್ರೈಪ್ಸ್‌ ಆ್ಯಪ್ ಮೂಲಕ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಿದರು.

ಮೂರು ಜನರ ತಂಡ ಪ್ರತಿವಲಯದಲ್ಲಿ ಹುಲಿ ವಾಸಕ್ಕೆ ಬೇಕಾಗುವ ಮಾಂಸಾಹಾರ ಪ್ರಾಣಿ ಮತ್ತು ದೊಡ್ಡ ಸಸ್ಯಹಾರಿ ಪ್ರಾಣಿಗಳನ್ನು ಗುರುತಿಸಿ ವಿವರಗಳನ್ನು ದಾಖಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.