ADVERTISEMENT

ಬಿಳಿಗಿರಿ ರಂಗನಾಥಸ್ವಾಮಿ ವ್ಯಾಪ್ತಿಯಲ್ಲಿ ಹುಲಿ ಮರಿ ಸೆರೆ: ಮೂರಕ್ಕೆ ಶೋಧ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 16:25 IST
Last Updated 16 ಜನವರಿ 2026, 16:25 IST
ಚಾಮರಾಜನಗರ ತಾಲ್ಲೂಕು ನಂಜೇದೇವನಪುರ ಗ್ರಾಮದ ಬಳಿ ಗುರುವಾರ ರಾತ್ರಿ ಸೆರೆ ಸಿಕ್ಕ ಹೆಣ್ಣು ಹುಲಿ ಮರಿ
ಚಾಮರಾಜನಗರ ತಾಲ್ಲೂಕು ನಂಜೇದೇವನಪುರ ಗ್ರಾಮದ ಬಳಿ ಗುರುವಾರ ರಾತ್ರಿ ಸೆರೆ ಸಿಕ್ಕ ಹೆಣ್ಣು ಹುಲಿ ಮರಿ   

ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ, ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಬಳಿ ಗುರುವಾರ ರಾತ್ರಿ 10 ತಿಂಗಳ ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ. ಉಳಿದ ಮೂರು ಮರಿಗಳಿಗೆ ಶೋಧ ನಡೆದಿದೆ.

ನಾಲ್ಕು ಸಾಕಾನೆ ಬಳಸಿ ಕಾರ್ಯಾಚರಣೆ ನಡೆಸುವಾಗ ಮರಿ ಸಿಕ್ಕಿದ್ದು ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ‘ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದ್ದು ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮದ ಸುತ್ತಮುತ್ತ ತಿಂಗಳ ಹಿಂದೆ ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ಕಾಣಿಸಿ ಗ್ರಾಮಸ್ಥರು ಭೀತಿ ಪಟ್ಟಿದ್ದರು. ಬಳಿಕ ಜ.9ರಂದು ತಾಯಿ ಹುಲಿ ಬೋನಿಗೆ ಬಿದ್ದಿತ್ತು. 

ADVERTISEMENT

ಚಾಮರಾಜನಗರ ವೃತ್ತದ ಸಿಸಿಎಫ್ ಮಾಲತಿ ಪ್ರಿಯಾ, ಡಿಎಫ್ಒ ಭಾಸ್ಕರ್, ಎಸಿಎಫ್ ಮಂಜುನಾಥ್, ವೈದ್ಯರಾದ ಆದರ್ಶ್, ವಾಸೀಂ ಹಾಗೂ ಸಿಬ್ಬಂದಿ ಇದ್ದರು.

ನಂಜೇದೇವನಪುರ ಬಳಿ ಮುಂದುವರೆದ ಕೂಂಬಿಂಗ್

ಚಾಮರಾಜನಗರ : ತಾಲ್ಲೂಕಿನ ನಂಜೇದೇವನಪುರ ಬಳಿಯಲ್ಲಿ ತಾಯಿ ಹುಲಿ ಸೆರೆಯಾದ ಬೆನ್ನ ಹಿಂದೆಯೇ ಅದರ ಒಂದು ಮರಿಕೂಡ ಸೆರೆ ಸಿಕ್ಕಿದ್ದು ಇನ್ನುಳಿದ ಮೂರು ಮರಿಗಳ ಪತ್ತೆಗೆ ಶೋಧ ಮುಂದುವರಿದಿದೆ.

ಬುಧವಾರ ರಾತ್ರಿ ಸೆರೆ ಸಿಕ್ಕಿರುವ ಹೆಣ್ಣು ಹುಲಿ ಮರಿಯ ವಯಸ್ಸು ಅಂದಾಜು 10 ತಿಂಗಳಾಗಿದ್ದು ದುಬಾರೆ ಕ್ಯಾಂಪಿನ 4 ಸಾಕಾನೆಗಳ ಮೂಲಕ ನಡೆಸಲಾದ ಕೂಂಬಿಂಗ್ ವೇಳೆ ಅರವಳಿಕೆ ನೀಡಿ ಇದನ್ನು ಸೆರೆ ಹಿಡಿಯಲಾಗಿದೆ.ಬಂಧಿಯಾಗಿರುವ ಹುಲಿ ಮರಿಯನ್ನು ಮೈಸೂರಿನಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದುಅದರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗುತ್ತಿದೆ.

ಜ.9ರಂದು ತಾಯಿ ಹುಲಿ ನಂಜೇದೇವನಪುರ ಆನೆಮಡುವಿನಕೆರೆ ಬಳಿಯ ವೀರನಪುರದ ನಟೇಶ್ ಅವರ ಜಮೀನಿನಲ್ಲಿ ಇಡಲಾಗಿದ್ದ ತುಮಕೂರು ಮಾದರಿಯ ಬೋನಿಗೆ ಬಿದ್ದಿತ್ತು. ಅದರ ಸನಿಹವೇ ಈಗ ಮರಿ ಸಿಕ್ಕಿದೆ. ನಾಲ್ಕು ಮರಿ ಮತ್ತು ತಾಯಿ ಹುಲಿ ಡಿ.19ರಂದು ಈ ಭಾಗದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದವು.ಕಾರ್ಯಾಚರಣೆ ಸಂದರ್ಭದಲ್ಲಿ ಚಾ.ನಗರ ವೃತ್ತದ ಸಿಸಿ ಎಫ್ ಮಾಲತಿ ಪ್ರಿಯಾ, ಡಿಎಫ್ಒ ಭಾಸ್ಕರ್, ಎಸಿಎಫ್ ಮಂಜುನಾಥ್, ವೈದ್ಯರಾದ ಆದರ್ಶ್, ವಾಸೀಂ ಮತ್ತು ಸಿಬ್ಬಂದಿ ಹಾಜರಿದ್ದರು.

ಸೆರೆ ಸಿಕ್ಕಿರುವ ತಾಯಿ ಹುಲಿ ಬನ್ನೇರುಘಟ್ಟದಲ್ಲಿದ್ದು ಮರಿಯನ್ನು ಮೈಸೂರಿನಲ್ಲಿ ಆರೈಕೆ ಮಾಡಲಾಗುತ್ತಿದೆ.ಇನ್ನು ಮೂರು ಮರಿಗಳನ್ನು ಹಿಡಿಯುವ ಆಶಾ ಭಾವನೆಯಲ್ಲಿ ಇಲಾಖೆ ಇದೆ.
ಭಾಸ್ಕರ್,ಡಿಸಿಎಫ್.

ಭಾಸ್ಕರ್ ಅವರಿಗೆ ತಾತ್ಕಾಲಿಕವಾಗಿ ಬಿಆರ್ ಟಿ ಹೊಣೆ

ಹುಲಿ ಕಾರ್ಯಾಚರಣೆ ಸ್ಥಳ ಬಿಆರ್ ಟಿಗೆ ಸೇರಿದ್ದು ಇಲ್ಲಿನ ಡಿಸಿ ಎಫ್ ಬಿ.ಎಸ್.ಶ್ರೀಪತಿ ಫೆಬ್ರವರಿ 5ರ ವರೆಗೂ ತರಬೇತಿ ಮೇಲೆ ಇರುವುದರಿಂದ ಅವರು ಬರುವ ವರೆಗೆ ಮಲೆಮಹದೇಶ್ವರ ವನ್ಯ ಜೀವಿ ಧಾಮದ ಡಿಸಿಎಫ್ ಭಾಸ್ಕರ್ ಅವರು ಬಿಆರ್ ಟಿ ಡಿಸಿಎಫ್ ಆಗಿಯೂ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.