ADVERTISEMENT

ಗುಂಡ್ಲುಪೇಟೆ | 3ನೇ ದಿನಗಳಿಂದ ಕಾರ್ಯಾಚರಣೆ: ಪತ್ತೆಯಾಗದ ಹುಲಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 4:03 IST
Last Updated 9 ಸೆಪ್ಟೆಂಬರ್ 2025, 4:03 IST
ಹುಲಿ ಪತ್ತೆಗೆ ಕೂಂಬಿಂಗ್ ನಡೆಸಲಾಯಿತು
ಹುಲಿ ಪತ್ತೆಗೆ ಕೂಂಬಿಂಗ್ ನಡೆಸಲಾಯಿತು   

ಗುಂಡ್ಲುಪೇಟೆ: ಮದ್ದೂರು ವಲಯ ವ್ಯಾಪ್ತಿಯಲ್ಲಿ ಹುಲಿ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸೋಮವಾರ ತೀವ್ರಗೊಳಿಸಿದ್ದು, ಹಳ್ಳಕೊಳ್ಳ, ಬಾಳೆ ತೋಟದಲ್ಲಿ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರು ಸಹ ಹುಲಿ ಕಾಣಿಸಿಕೊಂಡಿಲ್ಲ.

ಮದ್ದೂರು ವಲಯ ವ್ಯಾಪ್ತಿಯ ಚನ್ನಮಲ್ಲಿಪುರ, ಮದ್ದಯ್ಯನಹುಂಡಿ, ಬೇರಂಬಾಡಿ ಸುತ್ತಮುತ್ತಲು ಸಾಕಾನೆ ರೋಹಿತ್ ಬಳಕೆ ಮಾಡಿಕೊಂಡು 3ನೇ ದಿನವೂ ಬೆಳಿಗ್ಗೆಯಿಂದ ಸಂಜೆವರೆಗೆ ಕೂಂಬಿಂಗ್ ನಡೆಸಿದರೂ ಪ್ರಯೋಜವಾಗಿಲ್ಲ. ಹುಲಿಯ ಹಳೇ ಹೆಜ್ಜೆ ಗುರುತು ಮಾತ್ರ ಕಾಣಸಿಕ್ಕಿದ್ದು, 8 ಕ್ಯಾಮೆರಾಗಳಲ್ಲೂ ಹುಲಿಯ ಚಲನವಲನ ಪತ್ತೆಯಾಗಿಲ್ಲ ಎಂದು ಡಿಆರ್‌ಎಫ್‌ಒ ರವಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT