ಕೊಳ್ಳೇಗಾಲ: ತಾಲ್ಲೂಕಿನ ಉಗನಿಯ ಗ್ರಾಮದ ಜಮೀನಿನಲ್ಲಿ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನು ರಕ್ಷಿಸಲಾಯಿತು.
‘ಜಮೀನಿನಲ್ಲಿ ವಿಚಿತ್ರ ಶಬ್ದ ಬರುತ್ತಿತ್ತು, ಅಲ್ಲಿಗೆ ಹೋಗಿ ಗಮನಿಸಿದಾಗ ಹೆಬ್ಬಾವು ಅಲ್ಲಿತ್ತು’ ಎಂದು ಗ್ರಾಮದ ಮಹದೇವ ತಿಳಿಸಿದರು.
ವಿಷಯ ತಿಳಿದ ಉರಗ ರಕ್ಷಕ ಸ್ನೇಕ್ ಬಾಬು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ 12 ಅಡಿಯ ಹೆಬ್ಬಾವನ್ನು ಹಿಡಿದರು. ನಂತರ ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳ ಆದೇಶದ ಮೇರೆಗೆ ಭರಚುಕ್ಕಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.