ADVERTISEMENT

ಚಾಮರಾಜನಗರ: 12 ಮಂದಿಗೆ ಕೋವಿಡ್‌ ದೃಢ, ನಾಲ್ವರು ಗುಣಮುಖ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 17:08 IST
Last Updated 13 ನವೆಂಬರ್ 2020, 17:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 12 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ನಾಲ್ವರು ಗುಣಮುಖರಾಗಿದ್ದಾರೆ. ಸಾವಿನ ಪ್ರಕರಣ ವರದಿಯಾಗಿಲ್ಲ.

ಇದರೊಂದಿಗೆ ಜಿಲ್ಲೆಯಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 6,169ಕ್ಕೆ ಏರಿದೆ. 5,903 ಮಂದಿ ಗುಣಮುಖರಾಗಿದ್ದಾರೆ. ಸದ್ಯ 139 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 89 ಮಂದಿ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 27 ಮಂದಿ ಇದ್ದಾರೆ.

ಇದುವರೆಗೆ 109 ಮಂದಿ ಕೋವಿಡ್‌ನಿಂದ ಹಾಗೂ 19 ಮಂದಿ ಬೇರೆ ಅನಾರೋಗ್ಯಗಳಿಂದಾಗಿ ಮೃತಪಟ್ಟಿದ್ದಾರೆ.

ADVERTISEMENT

ಶುಕ್ರವಾರ 1,287 ಮಂದಿಯ ಕೋವಿಡ್‌ ಪರೀಕ್ಷೆಯ ವರದಿ ಬಂದಿದ್ದು, 1,275 ಮಂದಿ ವರದಿ ನೆಗೆಟಿವ್‌ ಬಂದಿವೆ.

ದೃಢಪಟ್ಟ 12 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ ಎರಡು, ಗುಂಡ್ಲುಪೇಟೆಯ ಆರು, ಕೊಳ್ಳೇಗಾಲ ತಾಲ್ಲೂಕಿನ ಆರು ಪ್ರಕರಣಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.