ADVERTISEMENT

ಚಾಮರಾಜನಗರ: 25 ಹೊಸ ಕೋವಿಡ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 4:14 IST
Last Updated 13 ಜುಲೈ 2021, 4:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 802 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 774 ವರದಿಗಳು ನೆಗೆಟಿವ್‌ ಬಂದಿವೆ. 28 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಜಿಲ್ಲಾಡಳಿತ ತನ್ನ ವರದಿಯಲ್ಲಿ 25 ಹೊಸ ಕೋವಿಡ್‌ ಪ್ರಕರಣಗಳನ್ನು ಉಲ್ಲೇಖಿಸಿದೆ.

33 ಮಂದಿ ಗುಣಮುಖರಾಗಿದ್ದಾರೆ. ಸಾವು ಸಂಭವಿಸಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ 427ಕ್ಕೆ ಇಳಿದಿದೆ. ಸೋಂಕಿತರ ಪೈಕಿ 25 ಮಂದಿ ಐಸಿಯುನಲ್ಲಿ ಹಾಗೂ 20 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 31,378ಕ್ಕೆ ಏರಿದೆ. 30,434 ಮಂದಿ ಗುಣಮುಖರಾಗಿದ್ದಾರೆ.

ADVERTISEMENT

ದೃಢಪಟ್ಟ 25 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ ಏಳು, ಗುಂಡ್ಲುಪೇಟೆಯ ನಾಲ್ಕು, ಕೊಳ್ಳೇಗಾಲದ ಎರಡು, ಹನೂರಿನ 12 ಪ್ರಕರಣಗಳು ಸೇರಿವೆ.

ಸೋಮವಾರ ಗುಣಮುಖರಾದ 33 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 18 ಮಂದಿ, ಗುಂಡ್ಲುಪೇಟೆಯ ಇಬ್ಬರು,ಕೊಳ್ಳೇಗಾಲದ ಐವರು, ಹನೂರಿನ ಏಳು ಮಂದಿ, ಯಳಂದೂರು ತಾಲ್ಲೂಕಿನ ಒಬ್ಬರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.