ADVERTISEMENT

ಚಾಮರಾಜನಗರ: ಎರಡು ಪ್ರಕರಣ ದೃಢ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 16:19 IST
Last Updated 25 ಅಕ್ಟೋಬರ್ 2021, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಸೋಮವಾರ ಜಿಲ್ಲೆಯಲ್ಲಿ 1,584 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಇಬ್ಬರಿಗೆ ಕೋವಿಡ್‌ ಇರುವುದು ಖಚಿತವಾಗಿದೆ. ಒಬ್ಬರು ಗುಂಡ್ಲುಪೇಟೆ ತಾಲ್ಲೂಕಿನವರು, ಇನ್ನೊಬ್ಬರು ಹನೂರು ತಾಲ್ಲೂಕಿನವರು.

ಸತತ ಎರಡನೇ ದಿನವೂ ಯಾರೊಬ್ಬರೂ ಗುಣಮುಖರಾಗಿಲ್ಲ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಎರಡು ಹೆಚ್ಚಾಗಿ 22ಕ್ಕೆ ತಲುಪಿದೆ. ಸೋಮವಾರವೂ ಸಾವಿನ ಪ್ರಕರಣ ವರದಿಯಾಗಿಲ್ಲ. ಐಸಿಯುನಲ್ಲಿ ಯಾರೂ ಇಲ್ಲ. 10 ಸೋಂಕಿತರು ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 32,556 ಪ್ರಕರಣ ದೃಢಪಟ್ಟಿವೆ. 31,995 ಮಂದಿ ಗುಣಮುಖರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.