ADVERTISEMENT

ಚಾಮರಾಜನಗರ | ಬಿಆರ್‌ಟಿ: ಎರಡು ಹೊಸ ಪಕ್ಷಿ ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 21:45 IST
Last Updated 29 ಜನವರಿ 2023, 21:45 IST
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ಅಭಯಾರಣ್ಯದ ಕೆ.ಗುಡಿ ವಲಯದಲ್ಲಿ ಕಂಡು ಬಂದ ಗ್ರೇಟ್‌ ಇಂಡಿಯನ್‌ ಹಾರ್ನ್‌ಬಿಲ್‌.ಚಿತ್ರಕೃಪೆ– ಯತೀನ್‌
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ಅಭಯಾರಣ್ಯದ ಕೆ.ಗುಡಿ ವಲಯದಲ್ಲಿ ಕಂಡು ಬಂದ ಗ್ರೇಟ್‌ ಇಂಡಿಯನ್‌ ಹಾರ್ನ್‌ಬಿಲ್‌.ಚಿತ್ರಕೃಪೆ– ಯತೀನ್‌   

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಮುಕ್ತಾಯಗೊಂಡ ಪಕ್ಷಿ ಸಮೀಕ್ಷೆಯಲ್ಲಿ ಎರಡು ಹೊಸ ಪ್ರಭೇದ ಪತ್ತೆಯಾಗಿವೆ.

ವಲಸೆ ಪಕ್ಷಿಗಳಾದ ನಾರ್ದರ್ನ್‌ ಶೆವೆಲರ್‌ (ಸಲಿಕೆ ರೀತಿಯ ಕೊಕ್ಕುಳ್ಳ ಬಾತು) ಹಾಗೂ ನಾರ್ದರ್ನ್ ಪಿನ್‌ಟೇಲ್‌ (ಸೂಜಿಬಾಲದ ಬಾತು) ಪಕ್ಷಿಗಳನ್ನು ಸ್ವಯಂಸೇವಕರು ಹೊಸದಾಗಿ ಗುರುತಿಸಿದ್ದಾರೆ ಎಂದು ಬಿಆರ್‌ಟಿಯ ನಿರ್ದೇಶಕಿ ಮತ್ತು ಡಿಸಿಎಫ್‌ ದೀಪ್‌ ಜೆ.ಕಾಂಟ್ರಾಕ್ಟರ್‌ ಹೇಳಿದ್ದಾರೆ.

‘ಹಲವು ವರ್ಷದ ನಂತರ ದಿ ಗ್ರೇಟ್‌ ಹಾರ್ನ್‌ಬಿಲ್‌ ಪಕ್ಷಿಯೂ ಬಿಆರ್‌ಟಿಯಲ್ಲಿ ಕಂಡು ಬಂದಿದೆ. 2012ರಲ್ಲಿ ವೈಜ್ಞಾನಿಕವಾಗಿ ಪಕ್ಷಿ ಗಣತಿ ಮಾಡಲಾಗಿತ್ತು. ಆಗ 272 ಪ್ರಭೇದಗಳನ್ನು ಗುರುತಿಸಲಾಗಿತ್ತು. ಈ ಬಾರಿ ಸ್ವಯಂ ಸೇವಕರು 274 ಪಕ್ಷಿಗಳನ್ನು ಗುರುತಿಸಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.