ಕೊಳ್ಳೇಗಾಲ: ನಗರದ ಕೊಂಗಳಕೆರೆ ಭರ್ತಿಯಾಗಿ ಕೋಡಿ ಬಿದ್ದ ಕಾರಣ ಇಂದಿರಾಗಾಂಧಿ ಕಾಲೋನಿ ಹಾಗೂ ಕೋಡಿ ಬೀದಿ ಕಾಲೋನಿಯಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಕೊಂಗಳ ಕೆರೆ ನಗರದ ಹೃದಯಭಾಗದಲ್ಲಿದೆ. ಸರ್ಕಟನ್ ಕಾಲುವೆಯ ನೀರು ಸಹ ಈ ಕೆರೆಗೆ ಸೇರುತ್ತದೆ. ನೀರು ಕುಪ್ಪಮ್ಮ ಕಾಲುವೆಯಲ್ಲಿ ಹೆಚ್ಚಾಗಿ ಹರಿದು ಕೋಡಿ ಬೀದಿ ಬಡಾವಣೆಯ ರಸ್ತೆ ಹಾಗೂ ಇಂದಿರಾಗಾಂಧಿ ಕಾಲೋನಿಗೆ ನುಗ್ಗಿದೆ.
ಮನೆಗಳಿಗೆ ನೀರು ನುಗ್ಗಿರುವುದರಿಂದ ಬಡಾವಣೆಯ ಮನೆಗಳಲ್ಲಿನ ಟಿ.ವಿ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೊಂಡಿದೆ. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಕೊಂಗಳಕೆರೆಯ ಕೋಡಿಯ ಮೇಲೆ ಮಣ್ಣನ್ನು ಸುರಿದು ನೀರು ಹರಿಯುವುದನ್ನು ನಿಯಂತ್ರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.