ADVERTISEMENT

ಚಾಮರಾಜನಗರ | ಪತ್ನಿಯಿಂದ ‘ಕರಿಮಣಿ ಮಾಲೀಕ ನೀನಲ್ಲ’ ರೀಲ್ಸ್‌; ಪತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 14:28 IST
Last Updated 15 ಫೆಬ್ರುವರಿ 2024, 14:28 IST
<div class="paragraphs"><p>ಕುಮಾರ್‌</p></div>

ಕುಮಾರ್‌

   

ಹನೂರು (ಚಾಮರಾಜನಗರ): ಪತ್ನಿಯು ಸೋದರ ಮಾವನೊಂದಿಗೆ ‘ಕರಿಮಣಿ ಮಾಲೀಕ ನೀನಲ್ಲ’ ಎಂಬ ಹಾಡಿಗೆ ಮಾಡಿದ ರೀಲ್ಸ್‌ನಿಂದ ಮನನೊಂದು ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಾಲ್ಲೂಕಿನ ಪಿ.ಜಿ.ಪಾಳ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ. 

ಗ್ರಾಮದ ಕುಮಾರ್‌ (33) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ರೂಪಾ, ತನ್ನ ಸೋದರ ಮಾವ ಗೋವಿಂದ ಮತ್ತು ಸಹೋದರಿ ಯಶೋಧ ಜೊತೆ ಫೆ.10ರಂದು ‘ಕರಿಮಣಿ ಮಾಲೀಕ ನೀನಲ್ಲ’ ಹಾಡಿಗೆ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದರು. ಈ ರೀಲ್ಸ್‌ ನೋಡಿ, ಸ್ನೇಹಿತರು ಕುಮಾರ್‌ ಗಮನಕ್ಕೆ ತಂದಿದ್ದರು.   

ADVERTISEMENT

ಈ ವಿಚಾರವಾಗಿ ಕುಮಾರ್ ಮತ್ತು ರೂಪಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಮನನೊಂದು ಕುಮಾರ್‌ ಮನೆ ಮುಂಭಾಗದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಮಾರ್‌ ಸೋದರ ಮಹದೇವಸ್ವಾಮಿ, ರೂಪಾ ಹಾಗೂ ಇತರ ಇಬ್ಬರ ವಿರುದ್ಧ ಹನೂರು ಠಾಣೆಯಲ್ಲಿ ದೂರು ನೀಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.