ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿ ಸಮೀಪದ ಕರಿಕಲ್ಲು ಕ್ವಾರಿಯಲ್ಲಿ ಗುರುವಾರ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.
ಚಾಮರಾಜನಗರ ತಾಲ್ಲೂಕಿನ ಕುರುಬರಹುಂಡಿ ಗ್ರಾಮದ ರಘು (36) ಮೃತ ವ್ಯಕ್ತಿ.
ಮೃತ ವ್ಯಕ್ತಿ ನಂದಿನಿ ಸ್ಟೋನ್ ಇಂನೆಕ್ಸ್ ಎಂಬ ಹೆಸರಿನ ಯತೀಂದ್ರಕುಮಾರ್ ಜೋಷಿ ಮಾಲೀಕತ್ವದ ಕರಿಕಲ್ಲು ಕ್ವಾರಿಯಲ್ಲಿ ಡ್ರಿಲ್ಲಿಂಗ್ ಕೆಲಸ ಮಾಡಿಕೊಂಡಿದ್ದರು.
ಘಟನಾ ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ವನರಾಜು, ಪಿಎಸ್‌ಐ ಈಶ್ವರ್, ಬೆರಳಚ್ಚು ಮತ್ತು ವಿಧಿ ವಿಜ್ಞಾನ ತಜ್ಞರು ಭೇಟಿನೀ ಡಿ ಪರಿಶೀಲಿಸಿದ್ದಾರೆ.
ಕಲ್ಲುಬಂಡೆ ಮೇಲೆ ಬಿದ್ದಿದ್ದ ಮೃತ ದೇಹವನ್ನು ಹಿಟಾಚಿಯಿಂದ ಕೆಳಗಿಳಿಸಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಶಂಕೆ: ಮದುವೆಯಾಗದೆ ಮನನೊಂದಿದ್ದ ಪುತ್ರ ಮನಸ್ಸಿಗೆ ಬೇಸರ ಮಾಡಿಕೊಂಡು ಬುಧವಾರ ಕರೆ ಮಾಡಿ ಅಳಲು ತೋಡಿಕೊಂಡಿದ್ದ. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಗುರುವಾರ ಗ್ರಾಮಸ್ಥರೊಬ್ಬರು ಪೋನ್ ಮಾಡಿ ಮಗ ಕರಿಕಲ್ಲು ಕ್ವಾರಿಯಲ್ಲಿ ಮೃತಪಟ್ಟಿರುವ ವಿಚಾರ ತಿಳಿಸಿದರು. ಅವಿವಾಹಿತನಾಗಿದ್ದ ಕಾರಣ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಾಯಿ ಲಕ್ಷ್ಮಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.