ADVERTISEMENT

ಯಳಂದೂರು: ನಿವೃತ್ತ ಶಿಕ್ಷಕನಿಗೆ ಚಿನ್ನದ ಉಂಗುರ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:35 IST
Last Updated 1 ಜುಲೈ 2025, 15:35 IST
ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಜಿ. ಮಹಾದೇವ ಅವರಿಗೆ ಗ್ರಾಮಸ್ಥರು ಚಿನ್ನದ ಉಂಗುರಗಳನ್ನು ತೊಡಿಸಿದರು
ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಜಿ. ಮಹಾದೇವ ಅವರಿಗೆ ಗ್ರಾಮಸ್ಥರು ಚಿನ್ನದ ಉಂಗುರಗಳನ್ನು ತೊಡಿಸಿದರು   

ಯಳಂದೂರು: ತಾಲ್ಲೂಕಿನ ಯರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಿವೃತ್ತ ಶಿಕ್ಷಕ ಜಿ.ಮಹದೇವ ಅವರಿಗೆ ಗ್ರಾಮಸ್ಥರು ಚಿನ್ನದ ಉಂಗುರಗಳ ಉಡುಗೊರೆ ನೀಡಿ ಸಂಭ್ರಮಿಸಿದರು.

ಮಹದೇವ ಅವರು ಒಂದೇ ಶಾಲೆಯಲ್ಲಿ 31 ವರ್ಷ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿದ್ದರು. ಬಹುತೇಕ ಪೋಷಕರು ದಶಕಗಳ ಹಿಂದೆ ಇದೇ ಶಾಲೆಯಲ್ಲಿ ಕಲಿತವರು. ಅವರ ಮಕ್ಕಳಿಗೂ ಮಹದೇವ ಶಿಕ್ಷಕರಾಗಿ, ಜನಾನುರಾಗಿಯಾಗಿ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ್ದರು. ಹೀಗಾಗಿ ಗ್ರಾಮಸ್ಥರು ಮತ್ತು ಹಳೇ ವಿದ್ಯಾರ್ಥಿಗಳು ಒಟ್ಟಾಗಿ 2 ಚಿನ್ನದ ಉಂಗುರಗಳ ನೀಡಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದರು.

ಮುಖ್ಯ ಶಿಕ್ಷಕಿ ಯಶೋಧಾ, ಶಿಕ್ಷಕರಾದ ಸುರೇಶ್, ನಿರ್ಮಲ, ರಾಣಿ, ಸುಮನ, ಉಮೇಶ್, ಮಂಜುಳಾ, ಮಮತಾ, ಉಮ್ಮೆಅಸ್ಮಾ, ಮುಖಂಡರಾದ ರಂಗಸ್ವಾಮಿ, ರಂಗದಾಸಯ್ಯ, ಜಯಣ್ಣ, ಮಹದೇವಯ್ಯ, ಲಿಂಗರಾಜು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.