
ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದ ಸಂಕ್ರಾಂತಿ ರಥೋತ್ಸವದ ಸಮಯದಲ್ಲಿ ಭಕ್ತರು ರಂಗನಾಥಸ್ವಾಮಿಗೆ ಮೊಲ ಅರ್ಪಿಸುವ ಮೂಲಕ ಹರಕೆ ತೀರಿಸಿದರು.
ವೈ.ಕೆ.ಮೋಳೆ ಗ್ರಾಮದ ಉಪ್ಪಾರ ಜನಾಂಗದವರು ಪ್ರತಿವರ್ಷ ಮೊಲವನ್ನು ಹಿಡಿದು ಪೂಜಾ ಕೈಂಕರ್ಯ ನೆರವೇರಿಸಿ ತನುಮನದಿಂದ ನೀಡುವ ವಾಡಿಕೆ ಇದೆ. ಆಚರಣೆಯ ಭಾಗವಾಗಿ ಶುಕ್ರವಾರ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ ಸಮೇತ ಮೊಲವನ್ನು ಮೆರವಣಿಗೆ ಮಾಡಿ ದೇವಾಲಯಕ್ಕೆ ಮುಟ್ಟಿಸಿದರು. ಸಂಜೆ ನಡೆಯುವ ದೈವಿಕ ಕಾರ್ಯದಲ್ಲಿ ಮೊಲಕ್ಕೆ ಬೆಳ್ಳಿಗೆಜ್ಜೆ ತೊಡಿಸಿ ಪೂಜೆ ಸಲ್ಲಿಸಿ ಮುಕ್ತಗೊಳಿಸಲಾಗುತ್ತದೆ. . ಇದು ಸಂಚರಿಸಿದ ಧಿಕ್ಕಿನ ಆಧಾರದ ಮಳೆ ಬೆಳೆ ಸಮೃದ್ಧತೆ ಹೆಚ್ಚುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಯಜಮಾನರಾದ ಸೋಮಣ್ಣ, ಎ.ವೆಂಕಟೇಶ್, ವೈ.ಸಿ.ಮಹದೇವಸ್ವಾಮಿ, ಕೆ.ವೆಂಕಟೇಶ್, ಕಾಮರಾಜು, ಕೆಂಪರಾಜು, ಕಾಮಶೆಟ್ಟಿ, ಲಿಂಗರಾಜು, ಪುಟ್ಟ, ವೈ.ಆರ್. ವೆಂಕಟರಾಮು, ವೈ.ಎನ್. ಪಾಂಡುರಂಗಶೆಟ್ಟಿ, ಚಿಕ್ಕಪುಟ್ಟಶೆಟ್ಟಿ, ನಾಗರಾಜು, ನಿಂಗರಾಜು, ವೈ.ಎನ್.ಮಹೇಶ್, ಮಹದೇವಶೆಟ್ಟಿ, ಚಾಮರಾಜು, ಬಸವಣ್ಣ, ಮಲ್ಲಶೆಟ್ಟಿ, ಕೃಷ್ಣಶೆಟ್ಟಿ, ರಾಮಶೆಟ್ಟಿ, ದೊಡ್ಡಶೆಟ್ಟಿ, ಮಲ್ಲಿಕಾರ್ಜುನಸ್ವಾಮಿ, ನಿಂಗರಾಜು, ದೊಡ್ಡರಾಜು, ಹಾಗೂ ಯುವಕ ಸಂಘದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.