ADVERTISEMENT

ಯೋಗಾಸನ: ಕೊಳ್ಳೇಗಾಲ ಪ್ರಕೃತಿ ರಮ್ಯ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 8:20 IST
Last Updated 23 ಫೆಬ್ರುವರಿ 2026, 8:20 IST
ಚಿನ್ನದ ಪದಕದೊಂದಿಗೆ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಪ್ರಕೃತಿ ರಮ್ಯ
ಚಿನ್ನದ ಪದಕದೊಂದಿಗೆ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಪ್ರಕೃತಿ ರಮ್ಯ   

ಕೊಳ್ಳೇಗಾಲ: ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಪ್ರಕೃತಿ ರಮ್ಯ. ಪಿ ಎಂಬ ವಿದ್ಯಾರ್ಥಿನಿ ಸೂರ್ಯ ನಮಸ್ಕಾರ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ. 

ಬೆಂಗಳೂರಿನ ಇಂಡಿಯನ್ ಅಕಾಡೆಮಿ ಕಾಲೇಜಿನಲ್ಲಿ ದ್ವಿತೀಯ ಎಂ.ಎಸ್‌ಸಿ ವ್ಯಾಸಂಗ ಮಾಡುತ್ತಿದ್ದಾರೆ. ಬೆಂಗಳೂರಿನ ಪರಿಪೂರ್ಣ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಯೋಗಾಸನದ ಸೂರ್ಯ ನಮಸ್ಕಾರ ಸ್ಪರ್ಧೆಯಲ್ಲಿ ಭಾಗವಹಿಸಿ 2 ಗಂಟೆಯ ಅವಧಿಯಲ್ಲಿ ಸುಮಾರು 1008 ಬಾರಿ ಸೂರ್ಯ ನಮಸ್ಕಾರ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಈಕೆಯ ಸಾಧನೆಗೆ ಇಂಡಿಯನ್ ಅಕಾಡೆಮಿಯ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿವರ್ಗ, ತರಬೇತುದಾರ ಡಾ.ಚಂದ್ರಣ್ಣ, ಭಾರತ್ ಬುಕ್ ಆಫ್ ರೆಕಾರ್ಡ್‌ನ ಸಂತೋಷ್‌ ಕುಮಾ‌ರ್, ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.