ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಗ್ರಾಮಸಭೆಯ ಕಲಾಪಗಳನ್ನು ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಯಶಸ್ವಿಯಾದರೆ ರಾಜ್ಯದಾದ್ಯಂತ ವಿಸ್ತರಣೆಗೊಳ್ಳಲಿದೆ.
ಗ್ರಾಮ ಸಭೆಗಳ ನಡಾವಳಿಗಳು, ನಿರ್ಣಯಗಳು ಎಲ್ಲರಿಗೂ ತಿಳಿಯಬೇಕೆಂದು ನೇರ ಪ್ರಸಾರ ಮಾಡುವುದಾಗಿ ಸರ್ಕಾರ 2024–25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು. ಅದರಂತೆ, ಗ್ರಾಮಸಭೆ ಲೈವ್ ವೀಕ್ಷಿಸಲು ಲಿಂಕ್‌ಗಳನ್ನು ಸ್ಥಳೀಯರಿಗೆ ಲಭ್ಯವಾಗುವಂತೆ ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಹಂಚಲಾಗುತ್ತಿದೆ.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಸ್ಥಳೀಯ ಶಾಸಕರು, ಸಚಿವರು ಸಹಿತ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳೂ ವೀಕ್ಷಿಸಲಿದ್ದಾರೆ.
‘ಪಂಚಾಯಿತಿಗಳ ಹೆಸರಿನಲ್ಲಿ ಈಗಾಗಲೇ ಯೂಟ್ಯೂಬ್ ಖಾತೆ ತೆರೆಯಲಾಗಿದೆ. ನಾಗರಿಕರು ಗ್ರಾಮಸಭೆಯ ಕಲಾಪಗಳನ್ನು ಶೀಘ್ರ ನೇರವಾಗಿ ವೀಕ್ಷಣೆ ಮಾಡಬಹುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರಾಮಸಭೆಗಳಲ್ಲಿ ಗ್ರಾಮಸ್ಥರೆಲ್ಲರೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ನೇರಪ್ರಸಾರದಿಂದ ಮನೆಯಲ್ಲಿ ಕುಳಿತು ವೀಕ್ಷಿಸಬಹುದು. ವಿದೇಶದಲ್ಲಿರುವ ಸ್ಥಳೀಯರಿಗೂ ತಮ್ಮ ಹಳ್ಳಿಗಳ ಬಗ್ಗೆ ತಿಳಿಯಲು ಇದು ಅಪರೂಪದ ಅವಕಾಶ’ ಎಂದರು.
ಪ್ರಶ್ನಿಸಿ: ‘ಗ್ರಾಮಸಭೆಯ ನಿರ್ಣಯಗಳು ಜಾರಿಯಾಗದಿದ್ದರೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಪ್ರಶ್ನಿಸಬಹುದು. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವಕ್ಕೆ ಇದು ಹೆಚ್ಚು ಅವಕಾಶ ಒದಗಿಸಲಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಲಹೆ, ಸೂಚನೆ ನೀಡಬಹುದು. ವಿಡಿಯೋ ಸಾರ್ವಕಾಲಿಕ ದಾಖಲೆಯಾಗಲಿದ್ದು, ಯಾವಾಗ ಬೇಕಾದರೂ ವೀಕ್ಷಿಸಬಹುದು’ ಎಂದರು.
‘ಗ್ರಾಮಗಳ ಅಭಿವೃದ್ಧಿ, ಯೋಜನೆಗಳ ಜಾರಿ, ಕಾರ್ಯಕ್ರಮ ರೂಪಿಸುವಿಕೆ ಹಾಗೂ ಮಹತ್ವದ ನಿರ್ಧಾರದ ವೇಳೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನೂ ನೇರ ಪ್ರಸಾರ ಹೆಚ್ಚಿಸುವ ನಿರೀಕ್ಷೆ ಇದೆ. ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ, ಅಕ್ರಮಗಳನ್ನು ತಡೆಯಲು ಸಹಕಾರಿಕಾರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಅತಿದೊಡ್ಡ ತಾಲ್ಲೂಕಾದ ಹನೂರಿನ ಶೇ 60ರಷ್ಟು ಭೂಭಾಗದಲ್ಲಿ ಅರಣ್ಯವಿದ್ದು ನೆಟ್‌ವರ್ಕ್ ಅಲಭ್ಯತೆ ಸಹಿತ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿಕೊಳ್ಳಲಾಗಿದೆ. ಶೀಘ್ರ ನೇರ ಪ್ರಸಾರದ ದಿನಾಂಕ ನಿಗದಿ ಮಾಡಲಾಗುವುದುಮೋನಾ ರೋತ್, ಜಿಲ್ಲಾ ಪಂಚಾಯಿತಿ ಸಿಇಒ
‘ವಿಡಿಯೊ ಸಾರ್ವಕಾಲಿಕ ದಾಖಲೆ’
‘ಗ್ರಾಮಸಭೆಯ ನಿರ್ಣಯಗಳು ಜಾರಿಯಾಗದಿದ್ದರೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು
ಪ್ರಶ್ನಿಸಬಹುದು. ಆಡಳಿತದಲ್ಲಿ ಪಾರದರ್ಶಕತೆ ಹಾಗೂ
ಉತ್ತರದಾಯಿತ್ವಕ್ಕೆ ಇದು ಹೆಚ್ಚು ಅವಕಾಶ ಒದಗಿಸಲಿದೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಲಹೆ, ಸೂಚನೆ ನೀಡಬಹುದು. ವಿಡಿಯೊ ಸಾರ್ವಕಾಲಿಕ
ದಾಖಲೆಯಾಗಲಿದ್ದು, ಯಾವಾಗ ಬೇಕಾದರೂ ವೀಕ್ಷಿಸಬಹುದು’ ಎಂದು ಮೋನಾ ರೋತ್ ಅವರು ಹೇಳಿದರು.
‘ಗ್ರಾಮಗಳ ಅಭಿವೃದ್ಧಿ, ಯೋಜನೆಗಳ ಜಾರಿ, ಕಾರ್ಯಕ್ರಮ ರೂಪಿಸುವಿಕೆ ಹಾಗೂ ಮಹತ್ವದ
ನಿರ್ಧಾರದ ವೇಳೆಯಲ್ಲಿ ಸಾರ್ವಜನಿಕರ
ಭಾಗವಹಿಸುವಿಕೆಯನ್ನೂ ನೇರ ಪ್ರಸಾರ ಹೆಚ್ಚಿಸುವ ನಿರೀಕ್ಷೆ ಇದೆ. ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ,
ಅಕ್ರಮಗಳನ್ನು ತಡೆಯಲು ಸಹಕಾರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.