ADVERTISEMENT

ಎಂಟು ಬರ ಜಿಲ್ಲೆಗಳಲ್ಲಿ ನೀರಾವರಿ ಹೋರಾಟ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 8:10 IST
Last Updated 16 ಮಾರ್ಚ್ 2012, 8:10 IST

ಚಿಕ್ಕಬಳ್ಳಾಪುರ: ಬರಗಾಲದ ಜೊತೆಗೆ ಒಂದೆಡೆ ಅಂತರ್ಜಲ ಬತ್ತುತ್ತಿದೆ. ಮತ್ತೊಂದೆಡೆ ನೀರಾವರಿ ಯೋಜನೆ ಅನು ಷ್ಠಾನಕ್ಕಾಗಿ ಸಂಚಲನ ಕಾಣತೊಡಗಿದೆ. ಈ ಬಾರಿ ಒಂದು ಜಿಲ್ಲೆ ಯಲ್ಲಿ ಮಾತ್ರವಲ್ಲದೇ ನೀರಾವರಿ ಸಮಸ್ಯೆ ಎದುರಿಸುತ್ತಿರುವ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಚಟುವಟಿಕೆ ಮೂಡತೊಡಗಿದೆ. 

 ಎಷ್ಟೇ ಕಷ್ಟ ಎದುರಾದರೂ ಮತ್ತು ಒತ್ತಡ ಹೇರಿದರೂ ಸರಿಯೇ, ನೀರಾವರಿಗಾಗಿ ಹೋರಾಟವನ್ನು ತೀವ್ರಗೊಳಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ.ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸುವತ್ತ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಮತ್ತು ರಾಜ್ಯ ಸರ್ಕಾರ ಒಂದೆಡೆ ಒಲವು ತೋರುತ್ತಿದ್ದರೆ, ಮತ್ತೊಂದೆಡೆ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ ವರದಿ ಆಧರಿಸಿದ ಶಾಶ್ವತ ನೀರಾವರಿ ಯೋಜನೆಯನ್ನೇ ಜಾರಿ ತರಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಒತ್ತಾಯಿಸುತ್ತಿದೆ. 

 ಎತ್ತಿನಹೊಳೆ ಯೋಜನೆ ಕಾಮಗಾರಿ ಸುಗಮವಾಗಿ ಅನುಷ್ಠಾನಗೊಳ್ಳುವುದೇ ಅಥವಾ ನೀರಾವರಿಗಾಗಿ ನಡೆ ಯುತ್ತಿ ರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವುದೇ ಎಂಬ ಕುತೂಹಲ ಮೂಡತೊಡಗಿದೆ.
ಎಂಟು ಜಿಲ್ಲೆಗಳಲ್ಲೂ ಹೋರಾಟ: ಪ್ರಸಕ್ತ ಸಾಲಿನ ನೀರಾವರಿ ಹೋರಾಟ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮಾತ್ರವಲ್ಲ, ಎಂಟಕ್ಕೂ ಹೆಚ್ಚು ಜಿಲ್ಲೆಗಳಿಗೂ ವಿಸ್ತರಿಸುವ ಕಾರ್ಯತಂತ್ರ ರೂಪಿಸಲಾಗುತ್ತಿದೆ.

ನೀರಾವರಿ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಮಾತ್ರವಲ್ಲದೇ ಹೋರಾಟ ಇನ್ನಷ್ಟು ಬಲಿಷ್ಠಗೊಳಿಸುವ ಬಗ್ಗೆ ಚಿಂತನೆ ನಡೆಸ ಲಾಗುತ್ತಿದೆ. ಹೋರಾಟ ಪ್ರಥಮ ಹೆಜ್ಜೆಯ ರೂಪದಲ್ಲಿ ಶುಕ್ರ ವಾರ ತುಮಕೂರಿನಲ್ಲಿ ನೀರಾವರಿ ಯೋಜನೆಗೆ ಬೃಹತ್ ಸಮಾ ವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆಯ ಮೈದಾನದಲ್ಲಿ ಶುಕ್ರವಾರ ನಡೆಯ ಲಿರುವ ಸಮಾವೇಶದಲ್ಲಿ ಎಂಟು ಜಿಲ್ಲೆಗಳ ಮುಖಂಡರು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಂಟು ಜಿಲ್ಲೆಗಳ ಹೋರಾಟಗಾರರನ್ನು ಒಳ ಗೊಂಡ ಶಾಶ್ವತ ಹೋರಾಟ ಸಮಿತಿ ರಚನೆಯಾಗಲಿದೆ. ನೂತನ ಹೋರಾಟ ಸಮಿತಿಯ ನೇತೃತ್ವದಲ್ಲಿ ಮುಂದಿನ ದಿನ ಗಳಲ್ಲಿ ಜಿಲ್ಲೆಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವ ಯೋಜನೆ ರೂಪಿಸಲಾಗಿದೆ.

ಗ್ರಾಮಮಟ್ಟದಲ್ಲಿ ಜಾಗೃತಿ: `ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಬತ್ತುತ್ತಿದ್ದು, 1500 ಅಡಿಗಳಷ್ಟು ಆಳ ಕೊಳವೆ ಬಾವಿಗಳನ್ನು ಕೊರೆದರೂ ನೀರು ಸಿಗುತ್ತಿಲ್ಲ. ಈಗಾಗಲೇ ನೀರಿನ ಸಮಸ್ಯೆ ಗಂಭೀರವಾಗಿದ್ದು, ಮುಂದಿನ ದಿನಗಳಲ್ಲಿ ಭಾರಿ ಸಮಸ್ಯೆ ಎದುರಾಗಲಿದೆ. ಜಿ.ಎಸ್.ಪರಮಶಿವಯ್ಯ ವರದಿಯನ್ವಯ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬಾರದಿದ್ದಲ್ಲಿ, ಚಿಕ್ಕಬಳ್ಳಾ ಪುರ ಸೇರಿದಂತೆ ಎಂಟು ಜಿಲ್ಲೆಗಳು ಬರಡಾಗಲಿವೆ. ಶಾಶ್ವತ ನೀರಾವರಿ ಅನುಷ್ಠಾನಕ್ಕಾಗಿ ಹೋರಾಟ ನಡೆಸುವುದು ಅನಿ ವಾರ್ಯವಾಗಿದೆ~ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯ ದರ್ಶಿ ಜಿ.ವಿ.ಶ್ರೀರಾಮರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.

`ಹೋರಾಟದ ಪ್ರಥಮ ಹಂತದ ರೂಪದಲ್ಲಿ ಶುಕ್ರವಾರ ತುಮಕೂರಿನಲ್ಲಿ ಸಮಾವೇಶ ಆಯೋಜಿಸಿದ್ದೇವೆ. ಚಿಕ್ಕ ಬಳ್ಳಾಪುರ, ಕೋಲಾರ, ತುಮಕೂರು ರಾಮನಗರ, ಬೆಂಗ ಳೂರು ಗ್ರಾಮಾಂತರ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮುಖಂಡರು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳ ಲಿದ್ದಾರೆ. ಸಮಾವೇಶದ ನಂತರ ನೂತನವಾಗಿ ಶಾಶ್ವತ ನೀರಾ ವರಿ ಹೋರಾಟ ಸಮಿತಿ ರಚಿಸುತ್ತೇವೆ ಎಂದು ತಿಳಿಸಿದರು.

`ಜಿಲ್ಲಾ ಮಟ್ಟದಲ್ಲಿ ಹೋರಾಟ ಸಮಿತಿ ರಚಿಸುವುದು ಮಾತ್ರವಲ್ಲದೇ ತಾಲ್ಲೂಕು, ಹೋಬಳಿ ಮತ್ತು ಗ್ರಾಮಮಟ್ಟದಲ್ಲಿ ಘಟಕಕಗಳನ್ನು ಸ್ಥಾಪಿಸುತ್ತೇವೆ. ನೀರಾವರಿ ಯೋಜನೆ ಕುರಿತು ಘಟಕದ ಸದಸ್ಯರಿಗೆ ಅಧ್ಯಯನ ಶಿಬಿರ ನಡೆಸಿ, ಅಗತ್ಯ ತರಬೇತಿ ಕೊಡುತ್ತೇವೆ. ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತೇವೆ. ಎತ್ತಿನಹೊಳೆ ಯೋಜನೆ ಮತ್ತು ಶಾಶ್ವತ ನೀರಾವರಿ ಯೋಜನೆಯ ನಕಾರಾತ್ಮಕ ಮತ್ತು ಸಕಾರಾತ್ಮಕ ಅಂಶಗಳನ್ನು ತಿಳಿಪಡಿಸುತ್ತೇವೆ. ಅದರ ಆಧಾರದ ಮೇಲೆ ನಿರಂತರ ಹೋರಾಟ ಕೈಗೊಳ್ಳುತ್ತೇವೆ~ ಎಂದು ಅವರು ಹೇಳಿದರು.

ರೂಪುರೇಷೆ ಸಿದ್ಧತೆಗೆ ಸಮಾವೇಶ
ಚಿಕ್ಕಬಳ್ಳಾಪುರ:  ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಗೊಳಿಸುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮತ್ತು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಚಿಕ್ಕಬಳ್ಳಾಪುರದಲ್ಲಿ ಮಾರ್ಚ್ 22ರಂದು ಸಮಾವೇಶ ಆಯೋಜಿಸಲಾಗಿದೆ.

ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದ್ದು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿ್ಲೆೆಗಳ ಮುಖಂಡರು ಮ್ತೆು ಕಾರ್ಯಕರ್ತರು ಪಾ್ಗೆೊ್ಳೆಲಿ್ದೆಾರೆ.

ಕೃತಿಗಳ ಬಿಡುಗಡೆ
ಚಿಕ್ಕಬಳ್ಳಾಪುರ:  ತುಮಕೂರಿನಲ್ಲಿ ಶುಕ್ರವಾರ ನಡೆಯಲಿರುವ ಶಾಶ್ವತ ನೀರಾವರಿ ಹೋರಾಟ ಸಮಾವೇಶದಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಎರಡು ಕೃತಿಗಳು ಬಿಡುಗಡೆಯಾಗಲಿವೆ. ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ಎಸ್.ಶ್ರೀರಾಮ ರೆಡ್ಡಿಯವರ `ಬರನಾಡಿನ ಬವಣೆಗಳು~ ಮತ್ತು ಕರಾವಳಿಯ ಸಿಪಿಎಂ ಮುಖಂಡ ಬಿ.ಮಾಧವ ಅವರ `ಕರಾವಳಿ ಜನರ ಆತಂಕಗಳು ಮತ್ತು ನೀರಾವರಿ~ ಎಂಬ ಕೃತಿಯು ಬಿಡುಗಡೆಯಾಗಲಿದೆ.

ಈ ಎರಡೂ ಕೃತಿಗಳು ರಾಜ್ಯದ ಜಲಸಂಪನ್ಮೂಲ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡಿವೆ. ಎತ್ತಿನಹೊಳೆ ಯೋಜನೆ ಮತ್ತು ಶಾಶ್ವತ ನೀರಾವರಿ ಯೋಜನೆಯ ಸಾಧಕ-ಬಾಧಕಗಳು ಸೇರಿದಂತೆ ಇತರ ವಿವರಣೆಯನ್ನು ಒಳಗೊಂಡಿವೆ. ಅಂಕಿ ಅಂಶಗಳ ಸಹಿತ ನೀರಾವರಿ ಯೋಜನೆಗಳ ಕುರಿತು ಮಾಹಿತಿ ನೀಡಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT