ADVERTISEMENT

ಎಸಿಬಿ ಬಲೆಗೆ ಮಾಪನ ಇಲಾಖೆ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 9:01 IST
Last Updated 26 ನವೆಂಬರ್ 2017, 9:01 IST

ಚಿಕ್ಕಬಳ್ಳಾಪುರ: ಬಂಗಾರದ ಮಳಿಗೆಯ ಡಿಜಿಟಲ್‌ ತೂಕದ ಯಂತ್ರದ ಪರವಾನಗಿ ನವೀಕರಿಸಲು ಮಳಿಗೆ ಮಾಲೀಕನಿಂದ ಮೆಕ್ಯಾನಿಕ್ ಅಶ್ವತ್ಥಪ್ಪ ಎಂಬುವರ ಮೂಲಕ ₹ 2,000 ಲಂಚ ಪಡೆದ ತೂಕ ಮತ್ತು ಅಳತೆ ಮಾಪನ ಇಲಾಖೆ ಇನ್‌ಸ್ಪೆಕ್ಟರ್‌ ಎಂ.ಗಿರಿಜೇಶ್ ಮತ್ತು ಅಶ್ವತ್ಥಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಮಂಚೇನಹಳ್ಳಿಯ ಅಂಬಿಕಾ ಜ್ಯುವೆಲರ್ಸ್ ಮಳಿಗೆಯ ತೂಕದ ಯಂತ್ರದ ಪರವಾನಗಿ ನವೀಕರಿಸಲು ಗಿರಿಜೇಶ್‌ ಅವರು ಮಳಿಗೆ ಮಾಲೀಕ ಮೋತಿರಾಮ್‌ ಅವರಿಗೆ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮೋತಿರಾಮ್‌ ಅವರು ಎಸಿಬಿಗೆ ದೂರು ನೀಡಿದ್ದರು. ಅಧಿಕಾರಿಗಳ ನಿರ್ದೇಶನದಂತೆ ಶನಿವಾರ ಸಂಜೆ ಅವರು ನಗರದ ಎಪಿಎಂಸಿ ಆವರಣದಲ್ಲಿರುವ ಕಚೇರಿಗೆ ತೆರಳಿದ್ದರು.

ಈ ವೇಳೆ ತೂಕದ ಯಂತ್ರ ಪರಿಶೀಲಿಸುವ ಮೆಕ್ಯಾನಿಕ್‌ ಅಶ್ವತ್ಥಪ್ಪ ಮೋತಿರಾಮ್‌ ಅವರಿಂದ ₹2,000 ಲಂಚದ ಹಣ ಸ್ವೀಕರಿಸಿದ್ದ. ಈ ವೇಳೆ ಕಚೇರಿ ಮೇಲೆ ದಾಳಿ ಮಾಡಿದ ಎಸಿಬಿ ಡಿವೈಎಸ್‌ಪಿ ರಾಮರತ್ನಕುಮಾರ್ ನೇತೃತ್ವದ ತಂಡದ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆಯಿತು ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.