ಗೌರಿಬಿದನೂರು: ತಾಲ್ಲೂಕಿನ ಸಿರು ಗುಪ್ಪ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು ಕಬ್ಬು ಪೂರೈಕೆ ಮಾಡಿದ ರೈತರಿಗೆ ನೀಡಬೇಕಾಗಿದ್ದ ಬಾಕಿ ಹಣ 4.86 ಕೋಟಿ ರೂಪಾಯಿಗಳನ್ನು ಗುರುವಾರ ಪಟ್ಟಣದಲ್ಲಿ ವಿತರಿಸ ಲಾಯಿತು. ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ಬೆಳೆಗಾರರಿಗೆ ಚೆಕ್ ವಿತರಿಸಿದರು. 
ಕಬ್ಬು ಸರಬರಾಜು ಮಾಡಿದ ಬಾಕಿ ಹಣ ನೀಡುವಂತೆ ಆಗ್ರಹಿಸಿ ರೈತರು ಸಾಕಷ್ಟು ಹೋರಾಟ ನಡೆಸಿದ್ದರು.
ರಾಜ್ಯ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಎನ್.ಜ್ಯೋತಿರೆಡ್ಡಿ ಮಾತ ನಾಡಿ, ಕಬ್ಬು ಬೆಳೆಗಾರರ ನಿರಂತರ ಹೋರಾಟದ ಫಲದಿಂದ ಈ ಹಣ ದೊರೆತಿದೆ. ಕಬ್ಬು ಪೂರೈಸುವ ರೈತರಿಗೆ ಹಿಂದೆ ಹಣ ನೀಡಿರುವ ದಾಖಲೆಗಳ ಆಧಾರದ ಮೇಲೆ ಚೆಕ್ ವಿತರಿಸುವಂತೆ ಸಲಹೆ ಮಾಡಿದರು.
`ಈಗಾಗಲೇ ಸಕ್ಕರೆ ಕಾರ್ಖಾನೆ ನಿಂತಿದೆ. ಇದನ್ನು ಮತ್ತೆ ಆರಂಭಿಸುವುದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗುತ್ತದೆ. 
ತಾಲ್ಲೂಕಿನ ಇನ್ನೂ ಕೆಲವು ಭಾಗಗಳಲ್ಲಿ ರೈತರಿಗೆ ಕಬ್ಬು ಬೆಳೆಯಲು ಉತ್ಸಾಹವಿದೆ. ಅದರತ್ತ ತಾಲ್ಲೂಕು ಆಡಳಿತ ಎಂದು ಜ್ಯೋತಿರೆಡ್ಡಿ ಅವರು ಅಭಿಪ್ರಾಯ ಪಟ್ಟರು.
ಇದೇ ವೇಳೆ ಸಿರುಗುಪ್ಪ ಸಕ್ಕರೆ ಕಾರ್ಖಾನೆ ರೈತ ಸಂಘದ ಅಧ್ಯಕ್ಷ ಸಿ.ಎಸ್.ಮೋಹನ್ ಮಾತನಾಡಿದರು. 
ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಉಪ ವಿಭಾಗಾಧಿಕಾರಿ ಸತೀಶ್‌ಕುಮಾರ್, ತಹ ಶೀಲ್ದಾರ್ ಡಾ.ಸುಧಾ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾ ಯಣ, ಕಾರ್ಯದರ್ಶಿ ಲೋಕೇಶ್‌ಗೌಡ ಮೊದಲಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.