ADVERTISEMENT

ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 11:55 IST
Last Updated 27 ಜನವರಿ 2012, 11:55 IST
ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ   

ಶಿಡ್ಲಘಟ್ಟ: ಜನಸಾಮಾನ್ಯರಿಗೆ ಅವರ ಹಕ್ಕು, ಕರ್ತವ್ಯಗಳು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ಕಾನೂನು ಸಾಕ್ಷರತಾ ರಥವನ್ನು ವಿವಿಧ ಗ್ರಾಮ ಗಳಿಗೆ ಕೊಂಡೊಯ್ಯಲಾಗುತ್ತಿರುವು ದಾಗಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು ವಿಜಯ್ ಕುಮಾರ್ ತಿಳಿಸಿದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಮುಂಭಾಗದಲ್ಲಿ ಗುರುವಾರ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದುಡಿಯುವ ಮಹಿಳೆ ಯರು ಮತ್ತು ಸ್ತ್ರೀ ಶಕ್ತಿ ಸಂಘಗಳನ್ನು ರಚಿಸಿಕೊಂಡಿರುವ ಮಹಿಳೆಯರು ತಮಗೆ ಕಾನೂನು ಏನೆಲ್ಲಾ ಅವಕಾಶಗಳು ಮತ್ತು ಹಕ್ಕುಗಳನ್ನು ನೀಡಿವೆ ಎಂಬು ದನ್ನು ಅರಿಯಬೇಕು.
 
ಮಹಿಳೆಯರು ಕೌಟುಂಬಿಕವಾಗಿ, ಸಾಮಾಜಿಕವಾಗಿ ಮತ್ತು ವೃತ್ತಿಯಲ್ಲೂ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಅದರಿಂದ ಪಾರಾಗಲು ನೆಮ್ಮದಿಯ ಜೀವನ ನಡೆಸಲು ಕಾನೂನಿನ ರಕ್ಷಣೆ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.

 ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ ತಾಲ್ಲೂಕಿನ ಪಲ್ಲಿಚೆರ್ಲು ಗ್ರಾಮ, ವರದನಾಯಕನ ಹಳ್ಳಿ, ಕುಂದಲಗುರ್ಕಿ, ಸೊಣ್ಣೇನಹಳ್ಳಿ, ಹಂಡಿಗನಾಳ, ನಡಪಿನಾಯಕನ ಹಳ್ಳಿ ಗಳಲ್ಲಿ ಮೂರು ದಿನಗಳ ಕಾಲ ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ ಜಂಟಿಯಾಗಿ ಕಾನೂನು ಸಾಕ್ಷರತೆ ಮೂಡಿಸಲಿದ್ದೇವೆ. ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳನ್ನೂ ಈ ಕಾನೂನು ಸಾಕ್ಷರತಾ ಆಂದೋಲನ ದಲ್ಲಿ ಸೇರಿಸಿಕೊಂಡಿರುವುದಾಗಿ ಅವರು ತಿಳಿಸಿದರು.

ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಲೋಕೇಶ್, ಸಹಾಯಕ ಸರ್ಕಾರಿ ಎಂಜಿನಿಯರ್ ಇ.ಡಿ.ಶ್ರೀನಿವಾಸ್, ಹಿರಿಯ ವಕೀಲರಾದ ಡಿ.ಅಶ್ವತ್ಥನಾರಾಯಣ, ಇ.ನಾರಾಯ ಣಪ್ಪ, ವಿ.ಸುಬ್ರಮಣ್ಯಪ್ಪ, ಕೆ. ಯೋಗಾನಂದ, ಟಿ.ವಿ.ಚಂದ್ರಶೇಖರ ಗೌಡ, ಜಿ.ಎನ್.ವಿಶ್ವನಾಥಪ್ಪ, ರವೀಂದ್ರ ನಾಥ, ಲಕ್ಷ್ಮಿ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.