ADVERTISEMENT

ಜೋಳಕ್ಕೆ ಬೆಂಬಲ ಬೆಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 8:01 IST
Last Updated 14 ಡಿಸೆಂಬರ್ 2013, 8:01 IST

ಗೌರಿಬಿದನೂರು: ಜೋಳಕ್ಕೆ ಬೆಂಬಲ ಬೆಲೆಗೆ  ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ನಡೆಸುತ್ತಿ­ರುವ ಪ್ರತಿ­ಭಟನೆ ಎರಡನೇ ದಿನವೂ ಮುಂದು­ವರೆಯಿತು. ರೈತರು ಎರಡು ದಿನದಿಂದ ಪ್ರತಿ­ಭಟನೆ ನಡೆಸುತ್ತಿದ್ದರೂ; ಅಧಿಕಾರಿ­ಗಳಿಗೆ ಸಮಸ್ಯೆ ಕೇಳುವ ಸೌಜನ್ಯವು ಇಲ್ಲದಂತಾ­ಗಿದೆ.

ರಾಜಕಾರಣಿಗಳು ಅಧಿಕಾರ ಸ್ವೀಕರಿ­ಸು­ವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ರೈತರಿಗೆ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡುತ್ತಾರೆ. ಆದರೆ ಅಧಿ­ಕಾರಕ್ಕೆ ಬಂದ ಮೇಲೆ ಪ್ರಾಮಾ­ಣಿಕ­ವಾಗಿ ಸ್ಪಂದಿಸುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ಲಕ್ಷ್ಮೀನಾರಾ­ಯಣ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಕಚೇರಿ ಮುಂದೆ ಊಟ ತಯಾರಿಸಿ ಸೇವಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್‌ಗೌಡ, ರೈತ ಸಂಘದ ಕಾರ್ಯ­ದರ್ಶಿ ಸನತ್ ಕುಮಾರ್, ಪದಾ­ಧಿ­ಕಾರಿಗಳಾದ ರಾಜಣ್ಣ, ಮುದ್ದ­ರಂಗಪ್ಪ, ಅಶ್ವತ್ಥಪ್ಪ, ವೆಂಕಟೇಶ್, ಸುರೇಶ್ ರೆಡ್ಡಿ, ದೇವನಹಳ್ಳಿ ಶ್ರೀನಿ­ವಾಸ್, ಆನಂದ್, ನಾರಾಯಣಪ್ಪ, ಮಂಜು­ನಾಥ್, ಆದಿ ನಾರಾ­ಯಣಪ್ಪಇತರರಿದ್ದರು.

ಚಿಕ್ಕಬಳ್ಳಾಪುರ: ನಗರಸಭೆಯಲ್ಲಿ ಪೌರಾ­ಯುಕ್ತರಿಂದ ಹಣ ಮತ್ತು ಅಧಿಕಾರದ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಕರು­ನಾಡ ಸೇನೆಯ ಸದಸ್ಯರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಹಲ ವಾಣಿಜ್ಯ ವಹಿವಾಟುಗಳನ್ನು ನೋಂದಣಿ ಮಾಡಿಸದೆ ನಡೆಸಲಾಗು­ತ್ತಿದೆ. ನೋಂದಣಿ ಮಾಡಿಸುವಾಗ ಕಾನೂನು ಪಾಲಿಸುತ್ತಿಲ್ಲ ಎಂದು ದೂರಿದರು.

ಹಳೆ ಬಸ್‌ ನಿಲ್ದಾಣದಲ್ಲಿ ನಡೆದಿ­ರುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದರ ಬಗ್ಗೆ ತನಿಖೆ ನಡೆಯ­ಬೇಕು. ನಡೆಯದ ಕಾಮಗಾರಿಗೆ ಬಿಲ್‌ ಪಾವತಿಸಿರುವುದರ ಬಗ್ಗೆಯೂ ತನಿಖೆ ನಡೆಯಬೇಕು. 2012 ರಿಂದ ಇದುವ­ರೆಗೂ 60 ಲಕ್ಷ ಮೊತ್ತದ ರಸ್ತೆ ದುರಸ್ತಿ ಟೆಂಡರ್‌ ಕರೆದಿದ್ದು, ಕಾಮಗಾರಿ ನಡೆದಿಲ್ಲ.

ಪ್ಲಾಸ್ಟಿಕ್‌ ನಿಯಂತ್ರಣ ಮಾಡಿಲ್ಲ. ಹಲ ಸಮಸ್ಯೆಗಳ ಬಗ್ಗೆ ಈಗಾಗಲೇ ಮನವಿಪತ್ರ ನೀಡಿದ್ದರೂ ಕ್ರಮ ಕೈಗೊಳ್ಳದಿರುವುರಿಂದ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿಪತ್ರವನ್ನು ಸಲ್ಲಿಸಿದರು. ಕರುನಾಡ ಸೇನೆ ಅಧ್ಯಕ್ಷ ಶ್ರೀರಾಮ­ಗೌಡ, ತಿಪ್ಪೇನಹಳ್ಳಿ ನಾರಾಯಣ­ಸ್ವಾಮಿ, ಬಾಲು, ರವಿಕುಮಾರ್‌, ಮುನಿ­ರಾಜು, ತಿಲಕ್‌ಕುಮಾರ್‌, ಬಾಲಸುಬ್ರ­ಮಣಿ, ಹೇಮಗಿರಿ, ರಾಜೇಶ್‌, ಮೂರ್ತಿ, ಚೇತನ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT