ಚಿಕ್ಕಬಳ್ಳಾಪುರ: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಪರಿಹಾರ ಬೋಧನೆಯನ್ನು ತಾಲ್ಲೂಕಿನ ಹತ್ತು ಪ್ರೌಢಶಾಲೆಗಳಿಗೂ ವಿಸ್ತರಿಸಲಾಗುವುದು. ತಜ್ಞ ಶಿಕ್ಷಕರ ಮೂಲಕ ವಿಶೇಷ ಮಕ್ಕಳಿಗೆ ಅಗತ್ಯ ಶಿಕ್ಷಣ ನೀಡ ಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ನಂದಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, `ಪರಿಹಾರ ಬೋಧನೆ ಇಂದಿನ ಅಗತ್ಯವಾಗಿದ್ದು, ಉತ್ತಮ ಕಲಿಕೆ ಮತ್ತು ಶಿಕ್ಷಣಕ್ಕೆ ಸಹಕಾರಿಯಾಗಿದೆ~ ಎಂದರು.
`ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣವನ್ನು ಉತ್ತಮಪಡಿಸಲು ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಪ್ರವಾಸ ಕಾರ್ಯಕ್ರಮ, ತರಬೇತಿ ಶಿಬಿರ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸಲು ಎಲ್ಲ ಹಂತಗಳಲ್ಲೂ ಸಹಕಾರ ನೀಡುವುದಾಗಿ ಹೇಳಿರುವ ಶಿಕ್ಷಣ ಪ್ರತಿಷ್ಠಾನದ ನೆರವಿನೊಂದಿಗೆ ಪ್ರೌಢಶಾಲೆಗಳಲ್ಲಿ ಪರಿಹಾರ ಬೋಧನೆ ಆರಂಭಿಸಲಾಗುವುದು~ ಎಂದರು.
`ತಜ್ಞ ಮತ್ತು ಅನುಭವಿ ಶಿಕ್ಷಕರು ವಿಶೇಷ ಮಕ್ಕಳಿಗೆ ತಾಳ್ಮೆ ಮತ್ತು ಸಹನೆಯಿಂದ ಪಾಠ ಮಾಡುತ್ತಾರೆ.
ಪರಿಹಾರ ಬೋಧನೆ ಮೂಲಕ ವಿಶೇಷ ಮಕ್ಕನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಶ್ರಮಿಸಲಾಗುವುದು. ಅವರಲ್ಲೂ ಶಿಕ್ಷಣದ ಕುರಿತು ಆಸಕ್ತಿ ಮೂಡಿಸಲಾಗುವುದು~ ಎಂದು ಅವರು ತಿಳಿಸಿದರು.
ಮೊನ್ಸಾಂಟೊ ಇಂಡಿಯಾ ಸಂಸ್ಥೆಯ ಸಾರ್ವಜನಿಕ ವ್ಯವಹಾರಗಳ ವಿಭಾಗದ ನಿರ್ದೇಶಕಿ ವಸುಧಾ ಝಾ, ~ಮೊನ್ಸಾಂಟೊ ಸಂಸ್ಥೆಯು ಶಿಕ್ಷಣ ಪ್ರತಿಷ್ಠಾನದ ಮೂಲಕ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತಿದೆ. ಸರ್ಕಾರಿ ಶಾಲೆಗಳಿಗೆ ಸೌಕರ್ಯಗಳನ್ನು ಪೂರೈಸಿ, ಅನುಕೂಲತೆಗಳನ್ನು ಕಲ್ಪಿಸುತ್ತಿದೆ~ ಎಂದರು.
ಬೇಸಿಗೆ ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳು ಕೋಲಾಟ ಮತ್ತು ನೃತ್ಯ ಪ್ರದರ್ಶಿಸಿದರು.
ಶಿಕ್ಷಣ ಪ್ರತಿಷ್ಠಾನದ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅನೀಶ್‌ಕುಮಾರ್, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಾಲರತ್ನಮ್ಮ, ಶಿಕ್ಷಕರಾದ ಎಂ.ಹನುಮಂತಪ್ಪ, ಮಂಜುನಾಥ್, ಕುಪ್ಪಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಶೋಷಣೆ ತಪ್ಪಿಸಿ
ಕೋಲಾರ: ಪರೀಕ್ಷಾ ಮಂಡಳಿಯಿಂದ ಮೌಲ್ಯಮಾಪಕರಿಗೆ ಆಗುತ್ತಿರುವ ಶೋಷಣೆ ತಪ್ಪಿಸಬೇಕೆಂದು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.