ADVERTISEMENT

ಬಣ್ಣದ ರೆಕ್ಕೆ ಹಕ್ಕಿಯ ಹೆಸರೇನು ?

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 5:30 IST
Last Updated 14 ಫೆಬ್ರುವರಿ 2012, 5:30 IST

ಶಿಡ್ಲಘಟ್ಟ: ಆ ಬಿಳಿಯ ಬಣ್ಣದ ರೆಕ್ಕೆಯ ಹಕ್ಕಿಯ ಹೆಸರೇನು ?, ಹೂವಿನಲ್ಲಿ ಮಕರಂದ ಹೀರುತ್ತಿರುವ ಹಕ್ಕಿ ಯಾವುದು ? ಹೀಗೆ ಕುತುಹೂಲದಿಂದ ಕೇಳಿ, ವಿವರವನ್ನು ಸಂಗ್ರಹಿಸುತ್ತಿದ್ದರು ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು.

ಇಂತಹದೊಂದು ಪಕ್ಷಿ ವೀಕ್ಷಣೆ ಪಾಠವನ್ನು `ನಮ್ಮ ಮುತ್ತೂರು~ ಸಂಸ್ಥೆ ಏರ್ಪಡಿಸಿತ್ತು.
ಪ್ರಕೃತಿ ಮಡಿಲಲ್ಲಿ ನಡೆದ ಪಾಠದಲ್ಲಿ ಸೂರಕ್ಕಿ, ಗಿಡುಗ, ಮೈನಾ, ಮುನಿಯಾ, ಮಿಂಚುಳ್ಳಿ, ಬೆಳವಾಯಿ, ಕುಟುರ, ಓರೊಯೋಲ್, ಫ್ಲೈಕ್ಯಾಚರ್, ಗೀಜುಗ, ನೆಲಕುಟುಕ, ಕಾಗೆ, ಗುಬ್ಬಿ, ಕುಂಡೆಕುಸ್ಕ ಮುಂತಾದ ಹಕ್ಕಿಗಳನ್ನು ಬೈನಾಕುಲರ್ ಮೂಲಕ ನೋಡಿ ಗುರುತಿಸಿ ಪುಸ್ತಕದಲ್ಲಿ ವಿದ್ಯಾರ್ಥಿಗಳು ಬರೆದುಕೊಳ್ಳುತ್ತಾ ಪುಳಕಿತರಾದರು.
`ಸಲೀಂ ಅಲಿ~ ಅವರ ಪುಸ್ತಕದ ಸಹಾಯದಿಂದ ಮುತ್ತೂರಿನ ಕೆರೆ, ಹಣ್ಣು ಬಿಟ್ಟಿರುವ ಆಲದ ಮರ, ಹೊರವಲಯದಲ್ಲಿನ ಮರಗಿಡಗಳನ್ನು ಗುರುತಿಸಲು ಯತ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತದನಂತರ ಶಾಲೆಯಲ್ಲಿ ಸ್ಲೈಡ್ ಷೋ ಮೂಲಕ ತಾಲ್ಲೂಕು, ಸುತ್ತಲಿನ ಪಕ್ಷಿಗಳ ಚಿತ್ರ ಪ್ರದರ್ಶನ ನಡೆಯಿತು. ಮುತ್ತೂರು ಸಂಸ್ಥೆಯ ವೈಭವ್ ಚೌಧರಿ ಮಾತನಾಡಿ,  ಪರಿಸರ ಸಂರಕ್ಷಣೆ ಬಗ್ಗೆ ಒಲವು ಮೂಡಿಸಲು ಪ್ರಯ ತ್ನಿಸು ತ್ತಿದ್ದೇವೆ ಎಂದರು. ಸಂಸ್ಥೆಯ ಉಷಾ ಶೆಟ್ಟಿ, ಮೇಲೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕಿ ಮಂಜುಳಾ, ಉದ್ಯೋಗಿ ದೀಪು, ಚಂದ್ರು ಮತ್ತು ಪವನ್ ಹಾಜರಿದ್ದರು.

ನೀರಿನ ಸಮಸ್ಯೆ ನೀಗಿಸಿ: ಗ್ರಾಮಸ್ಥರ ಮನವಿ
ಕೋಲಾರ: ಸಾರ್ವಜನಿಕ ನಲ್ಲಿಗಳ ಮೂಲಕ ಬರುವ ನೀರನ್ನು ಕೆಲವರು ತಮ್ಮ ಮನೆ ಸಂಪ್‌ಗಳಿಗೆ ಹರಿ ಸುತ್ತಿರುವುದರಿಂದ ತೊಂದರೆಯಾಗಿದೆ ಎಂದು ತಾಲ್ಲೂಕಿನ ಹೊಗರಿ ಗ್ರಾಮ ಸ್ಥರು ನಗರದಲ್ಲಿ ಸೋಮವಾರ ಸಚಿವ ಆರ್.ವರ್ತೂರು ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.